10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ರೋಡ್ ನಲ್ಲಿ ಎಸೆದು ಹೋದ ಪಾಪಿಗಳು

ಶನಿವಾರ, 15 ಸೆಪ್ಟಂಬರ್ 2018 (07:05 IST)
ನವದೆಹಲಿ : 10 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಹಲ್ಲೆ ಮಾಡಿ ರಸ್ತೆ ಬದಿ ಎಸೆದು ಹೋಗಿರುವ ಘಟನೆ ದೆಹಲಿ ನಡೆದಿದೆ.


ಗುರುವಾರ ರಾತ್ರಿ 10 ಗಂಟೆಗೆ ಸುಮಾರು ಮಯೂರ್ ವಿಹಾರದ ರಸ್ತೆ ಬದಿ ಬಾಲಕಿಯೊಬ್ಬಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ನ್ಯೂ ಅಶೋಕ್ ನಗರ ಠಾಣೆ ಪೊಲೀಸರು, ಬಾಲಕಿಯನ್ನು ಲಾಲ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಪಾಸಣೆ ಬಳಿಕ ವೈದ್ಯರು ತಿಳಿಸಿದ್ದಾರೆ. ಹಾಗೇ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕಿಯನ್ನು ಪೂರ್ವ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.


ಬಾಲಕಿಯ ಕೊಲೆಗೆ ಯತ್ನಿಸಿದ್ದ ದುಷ್ಕರ್ಮಿಗಳು, ಕಣ್ಣು ಹಾಗೂ ಮುಖದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಇದೀಗ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿದ್ದಾರೆ. ಈ ಕುರಿತು ಪೊಲೀಸರು  ತನಿಖೆ ಆರಂಭಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ