ಆಂಧ್ರ-ಕರ್ನಾಟಕದ ನಡುವೆ 500 ಬಸ್ ಗಳನ್ನು ಬಿಡಲು ಆಂಧ್ರ ಸರ್ಕಾರ ನಿರ್ಧಾರ
ಸೋಮವಾರ, 15 ಜೂನ್ 2020 (09:27 IST)
ಆಂಧ್ರಪ್ರದೇಶ : ಆಂಧ್ರ ಸರ್ಕಾರ ಅಂತರ್ ರಾಜ್ಯ ಬಸ್ ಸಂಚಾರ ಪ್ರಾರಂಭಿಸಲು ನಿರ್ಧರಿಸಿದ್ದು, ಈ ಮೂಲಕ ಕೊರೊನಾ ಹರಡುವ ಸಂಭವವಿದೆ ಇದೆ ಎನ್ನಲಾಗಿದೆ.
ಆಂಧ್ರ ಸರ್ಕಾರ ಹಂತ ಹಂತವಾಗಿ 500 ಬಸ್ ಗಳನ್ನು ಬಿಡಲು ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಅಂದರೆ ಜೂನ್ 17ರಿಂದ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಮಧ್ಯೆ 168 ಬಸ್ ಗಳು ಸಂಚರಿಸಲಿವೆ. ಬಳಿಕ ನಾಲ್ಕು ಹಂತದಲ್ಲಿ 500 ಬಸ್ ಗಳು ಕರ್ನಾಟಕ ಆಂಧ್ರದ ಮಧ್ಯೆ ಸಂಚರಿಸಲಿವೆ ಎಂದು ಆಂಧ್ರ ಸರ್ಕಾರ ಮಾಹಿತಿ ನೀಡಿದೆ. ಈ ಮೂಲಕ ಕೊರೊನಾ ವೈರಸ್ ಹರಡುವ ಸಾಧ್ತೆ ಹೆಚ್ಚಿದೆ ಎನ್ನಲಾಗಿದೆ.