ವರನ ಗೆಳೆಯರ ಕೃತ್ಯಕ್ಕೆ ನೊಂದು ಮದುವೆ ನಿರಾಕರಿಸಿದ ವಧು

ಶುಕ್ರವಾರ, 1 ಡಿಸೆಂಬರ್ 2023 (10:36 IST)
ವರನ ಸ್ನೇಹಿತರು ವಧುವನ್ನು ನೃತ್ಯಕ್ಕೆ ಎಳೆದು ಕರೆತಂದ ಹಿನ್ನಲೆಯಲ್ಲಿ ಮದುವೆ ಮುರಿದುಬಿದ್ದ ಘಟನೆ ಬರೇಲಿಯ ಹಳ್ಳಿಯೊಂದರಲ್ಲಿ ನಡೆದಿದೆ.
 
ವರವಧು ಇಬ್ಬರು ಸ್ನಾತಕೊತ್ತರ ಪದವೀಪದರಾಗಿದ್ದರು, ಇಬ್ಬರ ಮದುವೆಯನ್ನು ಏರ್ಪಡಿಸಲಾಗಿತ್ತು. ಆ ವೇಳೆ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಆಯೋಜಿಸಲಾಗಿತ್ತು. ಆಗ ವರನ ಗೆಳೆಯರು ವಧುವನ್ನು  ನೃತ್ಯ ಮಾಡಲು ಎಳೆದು ಸ್ಟೇಜ್ ಮೇಲೆ ಕರೆತಂದಿದ್ದಾರೆ. ಇದಕ್ಕೆ ವರ ಕೂಡ ಸಹಾಯ ಮಾಡಿದ್ದಾನೆ. ಇದರಿಂದ ಕೋಪಗೊಂಡ ವಧು ತನ್ನನ್ನು ಗೌರವಿಸದ ವ್ಯಕ್ತಿಯೊಂದಿಗೆ ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಎರಡು ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಮದುವೆಮುರಿದು ಬಿದ್ದಿದೆ.
 
ವಧುವಿನ ಕಡೆಯವರು ಪೊಲೀಸ್ ಠಾಣೆಗೆ ತೆರಳಿ ವರನ ಕಡೆಯವರ ವಿರುದ್ಧ ವರದಕ್ಷಿಣೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು ಈ ಕೇಸ್ ನ್ನು ಇತ್ಯರ್ಥ ಮಾಡಿ ಅವರವರ ಮನೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ