ಏಕಾಂಗಿಯಾಗಿದ್ದ ಹದಿಹರೆಯದ ಯುವತಿಯ ಮೇಲೆ ಅತ್ಯಾಚಾರ

ಶುಕ್ರವಾರ, 1 ಡಿಸೆಂಬರ್ 2023 (09:59 IST)
ಮನೆಯಲ್ಲಿ ಪೋಷಕರು ಹೊರಗೆ ಹೋಗಿದಾಗ  ವಾಶ್ ರೂಂ ಬಳಸುವ ನೆಪದಲ್ಲಿ ಮನೆಗೆ ಬಂದ ಸಂಬಂಧಿಕರಿಬ್ಬರು ಮನೆಯಲ್ಲಿ ಒಂಟಿಯಾಗಿರುವ ಹದಿಹರೆಯದ ಯುವತಿ ಮೇಲೆ ಮಾನಭಂಗ ಎಸಗಿ ಕೊಲೆ ಮಾಡಿದ್ದಾರೆ. ಬಳಿಕ ಅದನ್ನು ಆತ್ಮಹತ್ಯೆಯಂದು ಸಾಬೀತುಪಡಿಸಲು ಫ್ಯಾನ್ ಗೆ ನೇಣು ಬಿಗಿದಿದ್ದಾರೆ. ಆದರೆ, ಪೊಲೀಸರು ತನಿಖೆ ನಡೆಸಿದಾಗ ಸತ್ಯ ಸಂಗತಿ ಬಹಿರಂಗವಾಗಿದೆ.
 
ಮನೆಯಲ್ಲಿಯೇ 17 ವರ್ಷದ ಹದಿಹರೆಯದ ಯುವತಿಯ ಮೇಲೆ  ಆಕೆಯ ಇಬ್ಬರು ಸಂಬಂಧಿಕರು ಸೇರಿ ಮಾನಭಂಗ ಎಸಗಿ ಕೊಲೆ ಮಾಡಿ ನೇಣು ಬಿಗಿದು ಆತ್ಮಹತ್ಯೆ ಎಂದು ಸಾಬೀತುಮಾಡಲು ಹೊರಟ ಘಟನೆ ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ನಡೆದಿದೆ.
 
ಈ ಬಗ್ಗೆ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಬಗ್ಗೆ  ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ