SLBC ಸುರಂಗದೊಳಗೆ ಸಿಲುಕಿರುವ 8 ಜನ ಬದುಕುಳಿದಿರುವ ಸಾಧ್ಯತೆ ಕ್ಷೀಣ

Sampriya

ಸೋಮವಾರ, 24 ಫೆಬ್ರವರಿ 2025 (16:19 IST)
Photo Courtesy X
ತೆಲಂಗಾಣ: ಇಲ್ಲಿನ ನಾಗರ್‌ಕರ್ನೂಲ್ ಜಿಲ್ಲೆಯ ದೋಮಲಪೆಂಟಾ ಬಳಿಯ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಸುರಂಗದೊಳಗೆ 14 ಕಿ.ಮೀ ದೂರದಲ್ಲಿ ಸಿಲುಕಿರುವ ಎಂಟು ಜನರು ಬದುಕುಳಿದಿರುವ ಸಾಧ್ಯತೆ ಕ್ಷೀಣವಾಗಿದೆ  ಎಂದು ಹೇಳಲಾಗಿದೆ.

ಸಿಲುಕಿರುವ 8 ಮಂದಿ ಬಗ್ಗೆ ಬಗ್ಗೆ ಕಳೆದ 53 ಗಂಟೆಗಳಿಂದ ತಿಳಿದಿಲ್ಲ.

ಎಲ್ಲಾ ಕಠಿಣ ಪರಿಶ್ರಮ ಮತ್ತು ಹಗಲುಗಡಿಯಾರದ ಪ್ರಯತ್ನಗಳ ಹೊರತಾಗಿಯೂ, ಅನೇಕ ಕೇಂದ್ರ, ರಾಜ್ಯ ಮತ್ತು ಇತರ ಏಜೆನ್ಸಿಗಳ ಸಿಬ್ಬಂದಿಗಳನ್ನು ಒಳಗೊಂಡ ಜಂಟಿ ರಕ್ಷಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು, ಮಣ್ಣು ಹಾಗೂ ಕೆಸರಿನಿಂದಾಗಿ ಅವರಿರುವ ಸ್ಥಳವನ್ನು ತಲುಪಲು ಇನ್ನೂ ಕೆಲ ದಿನ ಬೇಕಾಗಬಹುದು ಎನ್ನಲಾಗಿದೆ.


ಈ ಬಗ್ಗೆ ತೆಲಂಗಾಣ ಸಚಿವ ಜುಪಲ್ಲಿ ಕೃಷ್ಣ ರಾವ್ ಅವರು ಪ್ರತಿಕ್ರಿಯಿಸಿ, ನಿಜ ಹೇಳಬೇಕೆಂದರೆ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ತುಂಬಾ ಕಡಿಮೆಯಿದೆ. 30 ಅಡಿ ಆಳದ ಸುರಂಗದಲ್ಲಿ ಸುಮಾರು 25 ಅಡಿ ಮಣ್ಣು ರಾಶಿಯಿಂದ ತುಂಬಿದೆ. ಸುರಂಗದ ಹೊರಗಿನಿಂದ ನಿಂತು ಅವರ ಹೆಸರನ್ನು ಕೂಗಿದ್ದು, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ