ವಿಚ್ಚೇದನ ಬಯಸಿ ಬಂದ ದಂಪತಿಗಳನ್ನು ಒಂದು ಮಾಡಿದ ಕೋರ್ಟ್

ಮಂಗಳವಾರ, 28 ನವೆಂಬರ್ 2023 (09:11 IST)
ಕಳೆದ 2022ರಲ್ಲಿ ದಂಪತಿಗಳಿಗೆ ವಿವಾಹವಾಗಿತ್ತು. ವೈದ್ಯೆಯಾಗಿದ್ದ ಪತ್ನಿ ಪತಿಯನ್ನು ತೊರೆದಿದ್ದಳು. ಪತಿಯ ವಿರುದ್ಧ ನ್ಯಾಯಾಲಯದಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಳು. ಪತ್ನಿಯಿಂದ ವಿಚ್ಚೇದನ ನೀಡುವಂತೆ ಪತಿ ಕೆಳ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಇದೀಗ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
 
ನ್ಯಾಯಮೂರ್ತಿಗಳ  ನೇತೃತ್ವದ ನ್ಯಾಯಪೀಠ, ದಂಪತಿಗಳ ನಡುವಿನ ಸಂಪರ್ಕ ಕೊರತೆಯಿಂದಾಗಿ ವಿಚ್ಚೇದನ ಬಯಸುತ್ತಿದ್ದಾರೆ. ಒಂದು ವೇಳೆ ದಂಪತಿಗಳು ಒಂದೇ ಹೋಟೆಲ್‌ನಲ್ಲಿ ಕಾಲ ಕಳೆದಲ್ಲಿ ವಿಚ್ಚೇದನ ಅರ್ಜಿಯನ್ನು ಹಿಂದಕ್ಕೆ ಪಡೆಯುವ ನಿರೀಕ್ಷೆಯಿದೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
 
ವಿಚ್ಚೇದನ ಬಯಸಿ ನ್ಯಾಯಾಲಯದ ಮೊರೆಹೋದ ದಂಪತಿಗಳಿಗೆ ಎರಡು ದಿನಗಳ ಕಾಲ ಹೋಟೆಲ್‌ನ ಒಂದೇ ಕೋಣೆಯಲ್ಲಿ ಕಾಲ ಕಳೆಯುವಂತೆ ಹೈಕೋರ್ಟ್ ವಿಚಿತ್ರ ಆದೇಶ ನೀಡಿದೆ.
 
ಹೈಕೋರ್ಟ್ ಆದೇಶವನ್ನು ಪಾಲಿಸುವುದಾಗಿ ಒಪ್ಪಿದ ದಂಪತಿಗಳು ನಗರದ ಹೋಟೆಲ್ಲೊಂದರಲ್ಲಿ ಎರಡು ದಿನಗಳ ಕಾಲ ಒಂದಾಗಿ ಕಾಲ ಕಳೆಯುವ ಭರವಸೆ ನೀಡಿದ್ದಾರೆ. ಶುಕ್ರವಾರದಂದು ಮತ್ತೆ ವಿಚಾರಣೆ ನಡೆಯಲಿದೆ. ವಿಚ್ಚೇದನ ಪ್ರಕರಣಗಳನ್ನು ಮಾನವೀಯತೆ ದೃಷ್ಠಿಯಿಂದ ನೋಡಬೇಕೇ ಹೊರತು ವೃತ್ತಿಪರತೆಯಿಂದಲ್ಲ ಎಂದು ವಕೀಲರಿಗೆ ಹೈಕೋರ್ಟ್ ಪೀಠ ಸಲಹೆ ನೀಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ