ಇಂತಹ ಕಾರಣಕ್ಕೂ ಪತ್ನಿಗೆ ವಿಚ್ಚೇದನ ನೀಡ್ತಾರಾ?

ಶುಕ್ರವಾರ, 24 ನವೆಂಬರ್ 2023 (23:21 IST)
ಹಲವು ವರ್ಷಗಳ ಹಿಂದೆ ವಿಚ್ಚೇದನ ಪಡೆಯಲು ಬಲವಾದ ಕಾರಣಗಳಿರುತ್ತಿದ್ದವು. ವಿಚ್ಚೇದನ ಪಡೆಯುವುದೇ ಅವಮಾನಕಾರಿ ಎಂದು ಭಾವಿಸಲಾಗಿತ್ತು. ಆದರೆ, ಇದೀಗ ಕ್ಷಲಕ ಕಾರಣಗಳಿಗೆ ವಿ್ಚ್ಚೇದನ ಪಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಇಲ್ಲಿದೆ ನೋಡಿ ಅಂತಹ ಒಂದು ಘಟನೆ ನಡೆದಿರುವುದು ವರದಿಯಾಗಿದೆ.  
 
ದಂಪತಿಗಳು ತಮ್ಮ ಮಕ್ಕಳೊಂದಿಗೆ ಪಿಕ್‌ನಿಕ್‌ಗೆ ತೆರಳಿ ನಂತರ ಮನೆಗೆ ವಾಪಸಾಗಿದ್ದರು. ಪತ್ನಿ ತನ್ನ ಮಕ್ಕಳನ್ನು ಕಾರಿನಿಂದಿಳಿಸಿ ಮನೆಯೊಳಗೆ ಕರೆದುಕೊಂಡು ಹೋಗಿದ್ದಾಳೆ. ಮನೆಯೊಳಗೆ ಬಂದ ಪತ್ನಿಯನ್ನು ನೋಡಿದ ಪತಿಮಹಾಶಯ ಕಾರಿನ ಡೋರ್ ಮುಚ್ಚುವಂತೆ ಹೇಳಿದ್ದಾನೆ. ಆದರೆ, ನೀವು ಹತ್ತಿರದಲ್ಲಿರುವುದರಿಂದ ಕಾರಿನ ಡೋರ್ ಮುಚ್ಚಬಹುದಲ್ಲ ಎಂದು ಕ್ಯಾತೆ ತೆಗೆದಿದ್ದಾಳೆ.
 
ಕಾರಿನ ಡೋರ್ ಮುಚ್ಚಲು ನಿರಾಕರಿಸಿದ ಪತ್ನಿಗೆ ಸೌದಿ ಮೂಲದ ವ್ಯಕ್ತಿಯೊಬ್ಬ ವಿಚ್ಚೇದನ ನೀಡಿದ ವಿಚಿತ್ರ ಘಟನೆ ರಿಯಾದ್‌ನಿಂದ ವರದಿಯಾಗಿದೆ. ಒಂದು ವೇಳೆ, ನೀನು ಕಾರಿನ ಡೋರ್ ಮುಚ್ಚದಿದ್ದಲ್ಲಿ ನಿನಗೆ ನನ್ನ ಮನೆಯೊಳಗೆ ಪ್ರವೇಶವಿಲ್ಲ. ನಿನ್ನಿಂದ ತಲಾಕ್ ಪಡೆಯುತ್ತೇನೆ ಎಂದು ಪತಿ ಗುಡುಗಿದ್ದಾನೆ. 
 
ಪತಿಯ ವರ್ತನೆಯಿಂದ ಕಂಗಾಲಾಗಿ ಪತ್ನಿ ತನ್ನ ತವರು ಮನೆಗೆ ವಾಪಸಾಗಿದ್ದಾಳೆ. ಇಂತಹ ಬೇಜವಾಬ್ದಾರಿ ವ್ಯಕ್ತಿಯೊಂದಿಗೆ ಬಾಳುವುದು ಸಾಧ್ಯವಿಲ್ಲ. ನಾನು ವಿಚ್ಚೇದನಕ್ಕೆ ಸಿದ್ದವಾಗಿದ್ದಾನೆ ಎಂದು ಹೇಳಿದ್ದಾಳೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ