ನೆರೆ ಹಾನಿವೀಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿಯ ಬೆನ್ನೇರಿ ಬಂದ ಉಪಮೇಯರ್, ಫೋಟೋ ವೈರಲ್

Sampriya

ಸೋಮವಾರ, 29 ಜುಲೈ 2024 (08:46 IST)
Photo Courtesy X
ಸೂರತ್‌: ಸೂರತ್ ಸೇರಿದಂತೆ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ಕೆಲವು ಭಾಗಗಳು ಕಳೆದ ವಾರ ಭಾರೀ ಮಳೆಯಿಂದ ಜರ್ಜರಿತವಾಗಿವೆ. ಈ ವೇಳೆ ಸೂರತ್‌ನ ಉಪಮೇಯರ್ ಮತ್ತು ಬಿಜೆಪಿ ನಾಯಕ ನರೇಂದ್ರ ಪಾಟೀಲ್ ಅವರನ್ನು ಅಗ್ನಿಶಾಮಕದ ಸಿಬ್ಬಂದಿ ಬೆನ್ನ ಮೇಲೆ ಕೂರಿಸಿ ಸವಾರಿ ಮಾಡಿಸಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶನಿವಾರ ನಗರದ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ಬಂದಿದ್ದ ಅವರು ಉಪ ಅಗ್ನಿಶಾಮಕ ಅಧಿಕಾರಿಯೊಬ್ಬರ ಬೆನ್ನಮೇಲೆ ಕೂತು ಸಾಗಿದರು. ಭಾರೀ ಮಳೆಗೆ ರಸ್ತೆ ಕೆಸರು ಆಗಿದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ಅಧಿಕಾರಿಯ ಬೆನ್ನೇರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ವೈರಲ್ ಆಗುತ್ತಿದ್ದ ಹಾಗೇ ಈ ವಿಚಾರಕ್ಕೆ ಸಮಾಜಾಯಿಸಿ ಕೊಟ್ಟ ನರೇಂದ್ರ ಅವರು ನನಗೆ ಕಾಲು ನೋವು ಇತ್ತು. ಅದಕ್ಕಾಗಿ ನೆರವು ಕೋರಿದೆ ಎಂದಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೂರತ್‌ನ ಉಪಮೇಯರ್ ನರೇಂದ್ರ ಪಾಟೀಲ್ ಅವರನ್ನು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹೊತ್ತೊಯ್ಯುತ್ತಿರುವ ಫೋಟೋ ವೈರಲ್ ಆಗಿದೆ.

ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಸೂರತ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ  ತಂಡಗಳು ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ನಿರಂತರ ಮಳೆಯ ನಂತರ ನೀರಿನ ಮಟ್ಟ ಹೆಚ್ಚಾಗುವುದರಿಂದ ತಗ್ಗು ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಪೊಲೀಸರು ಘೋಷಿಸಿದ್ದಾರೆ.

200 ಅಗ್ನಿಶಾಮಕ ಸಿಬ್ಬಂದಿಯ ಒಟ್ಟು 20 ಎಸ್‌ಎಫ್‌ಇಎಸ್ ತಂಡಗಳು, 18 ಬೋಟ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ