ದೆಹಲಿ: ಮೂವರು ಐಎಎಸ್ ಆಕ್ಷಾಂಕಿಗಳು ಸಾವು ಬೆನ್ನಲ್ಲೇ ಕೋಚಿಂಗ್ ಸೆಂಟರ್‌ನ ಮಾಲೀಕ ವಶಕ್ಕೆ

Sampriya

ಭಾನುವಾರ, 28 ಜುಲೈ 2024 (13:44 IST)
Photo Courtesy X
ನವದೆಹಲಿ: ಭಾರೀ ಮಳೆಗೆ ನೀರು ನುಗ್ಗಿ ಮೂವರು ಐಎಎಸ್ ಆಕಾಂಕ್ಷಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಐಎಎಸ್ ಕೋಚಿಂಗ್ ಸೆಂಟರ್‌ನ ಮಾಲೀಕರು ಮತ್ತು ಸಂಯೋಜಕರಾದ ಇಬ್ಬರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

"ಕೋಚಿಂಗ್ ಸೆಂಟರ್‌ನ ಮಾಲೀಕರು ಮತ್ತು ಸಂಯೋಜಕರನ್ನು ಬಂಧಿಸಲಾಗಿದೆ" ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ನಿನ್ನೆ ದೆಹಲಿಯ ಓಲ್ಡ್ ರಾಜೇಂದರ್ ನಗರದಲ್ಲಿನ ಜನಪ್ರಿಯ ಐಎಎಸ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಬೇಸ್‌ಮೆಂಟ್‌ನಲ್ಲಿ ನೀರು ತುಂಬಿದ್ದರಿಂದ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಶ್ರೇಯಾ ಯಾದವ್, ತೆಲಂಗಾಣದ ತಾನ್ಯಾ ಸೋನಿ, ಕೇರಳದ ಎರ್ನಾಕುಲಂ ನಿವಾಸಿ ನಿವಿನ್ ಡಾಲ್ವಿನ್ ಎಂದು ಗುರತಿಸಲಾಗಿದೆ.

ಪ್ರಕರಣ ಸಂಬಂಧ ದೆಹಲಿಯ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮಾಜಿ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

'ನೆಲಮಾಳಿಗೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳ ಸಾವಿಗೆ ಯಾರು ಹೊಣೆ? ಹತ್ತು ದಿನಗಳಿಂದ ಚರಂಡಿ ಸ್ವಚ್ಛತೆಗೆ ಒತ್ತಾಯಿಸುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಬಹಿರಂಗಪಡಿಸಿದ್ದಾರೆ. ಭ್ರಷ್ಟಾಚಾರವಿಲ್ಲದೆ ಅಕ್ರಮ ನೆಲಮಾಳಿಗೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಹೆಚ್ಚುವರಿ ಮಹಡಿಗಳು ಹೇಗೆ? ಲಂಚವಿಲ್ಲದೆ ರಸ್ತೆಗಳು ಮತ್ತು ಚರಂಡಿಗಳ ಮೇಲಿನ ಅತಿಕ್ರಮಣಗಳು ಹೇಗೆ ಸಂಭವಿಸುತ್ತವೆ, ಸುರಕ್ಷತಾ ನಿಯಮಗಳನ್ನು ಅನುಸರಿಸುವ ಅಗತ್ಯವಿಲ್ಲ, ಕೇವಲ ಹಣವನ್ನು ಪಾವತಿಸಿ ಮತ್ತು ಕೆಲಸ ಮಾಡಲಾಗುತ್ತದೆ' ಎಂದು ಮಲಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ