ತ್ರಿವಳಿ ತಲಾಕ್ ನಿಷೇಧಿಸುವ ವಿಧೇಯಕದ ಬಗ್ಗೆ ಡಿಎಂಕೆ ಟೀಕೆ

ಶುಕ್ರವಾರ, 29 ಡಿಸೆಂಬರ್ 2017 (18:40 IST)
ತ್ರಿವಳಿ ತಲಾಕ್‌ ನಿಷೇಧಿಸುವ ವಿಧೇಯಕವನ್ನು ಲೋಕಸಭೆಯಲ್ಲಿ ತರಾತುರಿಯಿಂದ ಪಾಸು ಮಾಡಿರುವ ಕೇಂದ್ರ ಸರಕಾರವನ್ನು ಟೀಕಿಸಿರುವ ಡಿಎಂಕೆ ಮುಸ್ಲಿಂ ಮಹಿಳೆಯರ ಕಲ್ಯಾಣದ ಬಗ್ಗೆ ನೈಜ ಕಳಕಳಿಯನ್ನು ಹೊಂದಿದೆಯೇ ಎಂದು ಪ್ರಶ್ನಿಸಿದೆ.
 
 
ಮಸೂದೆಯನ್ನು ಪಾಸು ಮಾಡುವ ಮುನ್ನ ಅದನ್ನು ಸ್ಥಾಯಿ ಸಮಿತಿಗೆ ಸಲ್ಲಿಸಬೇಕಿತ್ತು ಎಂದು ಡಿಎಂಕೆ ಕಾರ್ಯಾಧ್ಯಕ್ಷ  ಎಂ ಕೆ ಸ್ಟಾಲಿನ್‌ ಅವರು ಹೇಳಿದ್ದಾರೆ.
 
ತ್ರಿವಳಿ ತಲಾಕ್‌ ನೀಡುವ ಪುರುಷರಿಗೆ 3 ವರ್ಷಗಳ ಜೈಲು ಶಿಕ್ಷೆ ನೀಡುವ ಕ್ರಮ ಅತ್ಯಂತ ಕಠಿಣವಾದದು ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ