ಹರಿಯಾಣ: ತಾನೇ ಸೊಸೆಯನ್ನು ಕೊಂದು ಹೂತು ಹಾಕಿ, ನಾಪತ್ತೆಯಾಗಿದ್ದಾಳೆಂದು ದೂರು ನೀಡಿ ನಾಟಕವಾಡಿ 2 ತಿಂಗಳ ಬಳಿಕ ಆರೋಪಿ ಮಾವ ಸಿಕ್ಕಿಬಿದ್ದ ಪ್ರಕರಣ ಸಂಬಂಧ ಇದೀಗ ಬೆಚ್ಚಿಬೀಳಿಸುವ ಸಂಗತಿಯೊಂದು ಹೊರಬಿದ್ದಿದೆ.
ಹರಿಯಾಣದ ಫರಿದಾಬಾದ್‌ನಲ್ಲಿ ದಾಖಲಾದ ಪ್ರಕರಣ ಸಂಬಂಧ ಸಂತ್ರಸ್ತೆಯ ಮೇಲೆ ಆಕೆಯ ಮಾವ ಅತ್ಯಾಚಾರ ಎಸಗಿದ್ದರು ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೊಸೆಯನ್ನು ಕೊಂದು ತಾನೇ ಮನೆ ಎದುರು ಹೂತು ಹಾಕಿ, ಸೊಸೆ ನಾಪತ್ತೆಯಾಗಿದ್ದಾಳೆ ಪೊಲೀಸರಿಗೆ ದೂರು ನೀಡಿದ 2 ತಿಂಗಳ ಬಳಿಕ ಕೊಲೆ ಪ್ರಕರಣದ ಆರೋಪಿ ಆಕೆಯ ಮಾವನನ್ನು ಪೊಲೀಸರು ಬಂಧಿಸಿದ್ದರು.
ಇದೀಗ ತನಿಖೆ ಸಂಬಂಧ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಕೊಲೆಗೂ ಮುನ್ನಾ ಆಕೆಯ ಮೇಲೆ ಮಾವ ಅತ್ಯಾಚಾರ ಎಸಗಿರುವುದಾಗಿ ಬಾಯಿಬಿಟ್ಟಿದ್ದಾನೆ. ಇನ್ನೂ ಕೊಲೆಯಲ್ಲಿ ಸಂತ್ರಸ್ತೆಯ ಅತ್ತೆಯೂ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಪೊಲೀಸರು ಇದೀಗ ಸಂತ್ರಸ್ತೆಯ ಪತಿ ಅರುಣ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಪ್ರಮುಖ ಆರೋಪಿ, ಮಾವ ಭೂಪ್ ಸಿಂಗ್ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿತು. ವಿಚಾರಣೆ ವೇಳೆ, ಕೊಲೆ ಪೂರ್ವ ಯೋಜಿತ ಎಂದು ಆತ ಬಹಿರಂಗಪಡಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
24 ವರ್ಷದ ತನ್ನುವಿನ ಕೊಲೆಯನ್ನು ಏಪ್ರಿಲ್ 15 ರಂದು ಯೋಜಿಸಲಾಗಿತ್ತು ಮತ್ತು ಆಕೆಯ ಪತಿ ಮತ್ತು ಅತ್ತೆ ಕೂಡ ಈ ಯೋಜನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.