ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

Krishnaveni K

ಶುಕ್ರವಾರ, 27 ಜೂನ್ 2025 (19:36 IST)
ಕೋಲ್ಕತ್ತಾ: ಇಲ್ಲಿನ ಕಾನೂನು ವಿದ್ಯಾರ್ಥಿನಿ ಮೇಲೆ ಕಾಲೇಜ್ ಕ್ಯಾಂಪಸ್ ನಲ್ಲೇ ನಡೆದ ಅತ್ಯಾಚಾರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಘಟನೆ ಸಂಬಂಧ ಟಿಎಂಸಿ ಕಾರ್ಯಕರ್ತ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು.

ಬಂಧಿತರನ್ನು ಮನೋಜಿತ್ ಮಿಶ್ರಾ, ಜೈಬ್ ಅಹ್ಮದ್ ಮತ್ತು ಪ್ರಮಿತ್ ಮುಖ್ಯೋಪಾದ್ಯಾಯ ಎಂದು ಗುರುತಿಸಲಾಗಿದೆ. ಈ ಪೈಕಿ ಮುಖ್ಯ ಆರೋಪಿ 31 ವರ್ಷದ ಮನೋಜಿತ್ ಮಿಶ್ರಾ. ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಕೆಲವು ಸತ್ಯ ಬಾಯ್ಬಿಟ್ಟಿದ್ದಾರೆ.

ಮುಖ್ಯ ಆರೋಪಿ ಮನೋಜಿತ್ ಮಿಶ್ರಾಗೆ ವಿದ್ಯಾರ್ಥಿನಿ ಮೇಲೆ ಪ್ರೇಮವಿತ್ತು. ಆಕೆಗೆ ಮದುವೆಯಾಗುವಂತೆ ಆತ ಬಲವಂತ ಮಾಡಿದ್ದ. ಆದರೆ ಏನೇ ಮಾಡಿದರೂ ಆಕೆ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಮದುವೆಯಾಗಲೂ ಒಪ್ಪಿರಲಿಲ್ಲ. ಇದರಿಂದ ಮನೋಜಿತ್ ರೊಚ್ಚಿಗೆದ್ದಿದ್ದ.

ಸಂತ್ರಸ್ತೆಗೆ ಆಗಲೇ ಇನ್ನೊಬ್ಬನ ಜೊತೆ ಪ್ರೇಮವಿತ್ತು ಎನ್ನಲಾಗಿದೆ. ಹೀಗಾಗಿ ಮನೋಜಿತ್ ಒಂದು ವೇಳೆ ತನ್ನನ್ನು ಮದುವೆಯಾಗಲು ಒಪ್ಪದೇ ಹೋದರೆ ನಿನ್ನ ಪ್ರಿಯಕರನಿಗೆ ಮತ್ತು ಮನೆಯವರಿಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಬುಧವಾರ ಸಂಜೆ ಕಾಲೇಜಿಗೆ ಬಂದಿದ್ದ ಸಂತ್ರಸ್ತೆಯನ್ನು ಆರೋಪಿಗಳು ಬಲವಂತವಾಗಿ ಗಾರ್ಡ್ ರೂಂಗೆ ಕರೆದೊಯ್ದು ರೇಪ್ ಮಾಡಿದ್ದರು. ತನ್ನ ಮೇಲೆ ರೇಪ್ ಮಾಡಲು ಬಂದಾಗ ಸಂತ್ರಸ್ತೆ ಆರೋಪಿಗಳ ಕಾಲು ಹಿಡಿದು ಏನೂ ಮಾಡದಂತೆ ಬೇಡಿಕೊಂಡಿದ್ದಳು. ಆದರೂ ಅವರು ಕೇಳಲೇ ಇಲ್ಲ ಎಂದು ಪೊಲೀಸರಿಗೆ ವಿವರಿಸಿದ್ದಾಳೆ. ರೇಪ್ ಮಾಡುವಾಗ ಇನ್ನೊಬ್ಬಾತ ವಿಡಿಯೋ ಮಾಡಿಕೊಂಡಿದ್ದ. ಇದನ್ನು ಬಹಿರಂಗಪಡಿಸುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ವಿವರಿಸಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ