ಮಗಳನ್ನ ಕುಡುಗೋಲಿನಿಂದ ಕೊಚ್ಚಿ ಕೊಂದ ತಂದೆ!

ಮಂಗಳವಾರ, 26 ಜುಲೈ 2022 (13:31 IST)
ಚೆನ್ನೈ : ತನ್ನ ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದಕ್ಕೆ ಅಳಿಯ ಮತ್ತು ಮಗಳನ್ನು ಟುಟಿಕೋರಿನ್ ಜಿಲ್ಲೆಯ ತಂದೆಯೊಬ್ಬ ಕುಡುಗೋಲಿನಲ್ಲಿ ಕೊಚ್ಚಿ ಕೊಂದಿದ್ದಾನೆ.

ಟುಟಿಕೋರಿನ್ ಜಿಲ್ಲೆಯ ಕೋವಿಲ್ಪಟ್ಟಿ ನಗರದ ಸಮೀಪದ ವೀರಪಟ್ಟಿ ಗ್ರಾಮದ ನಿವಾಸಿ ಮುತ್ತುಕುಟ್ಟಿ(50) ಆರೋಪಿಯಾಗಿದ್ದಾನೆ. ಆತನ ಪುತ್ರಿ ರೇಷ್ಮಾ(20) ಕೋವಿಲ್ಪಟ್ಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಳು. 

ಅದೇ ಪ್ರದೇಶದ ದಿನಗೂಲಿ ಕಾರ್ಮಿಕ ಮಾಣಿಕರಾಜ್(26)ನನ್ನು ರೇಷ್ಮಾ ಪ್ರೀತಿಸುತ್ತಿದ್ದಳು. ಮುತ್ತುಕುಟ್ಟಿಗೆ ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದಾರೆ. ಆದರೆ ಮುತ್ತುಕುಟ್ಟಿ ಒಪ್ಪಿಕೊಂಡಿಲ್ಲ. ಪರಿಣಾಮ ಇಬ್ಬರು ಓಡಿ ಹೋಗಿ ಮದುವೆ ಮಾಡಿಕೊಂಡು ಮತ್ತೆ ಹಳ್ಳಿಗೆ ವಾಪಸ್ ಬಂದಿದ್ದರು.

ಮುತ್ತುಕುಟ್ಟಿ ಅವರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದನು. ಆದರೆ ಗ್ರಾಮ ಪಂಚಾಯತಿ ಮೂಲಕ ಇಬ್ಬರಿಗೂ ಗ್ರಾಮದಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡಲಾಯಿತು.

ಈ ಕಾರಣ ಮಗಳ ಮೇಲೆ ಮುತ್ತುಕುಟ್ಟಿಗೆ ಸಿಟ್ಟು ಹೆಚ್ಚುವಂತೆ ಮಾಡಿತು. ಸೋಮವಾರ ಸಂಜೆ ಮನೆಯಲ್ಲಿ ರೇಷ್ಮಾ ಮತ್ತು ಆಕೆಯ ಪತಿ ಮಾಣಿಕರಾಜ್ ಇಬ್ಬರೇ ಇದ್ದಾಗ ಮುತ್ತುಕುಟ್ಟಿ ಅಲ್ಲಿಗೆ ಹೋಗಿ ಇಬ್ಬರನ್ನೂ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ