ತನ್ನ ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ : ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

ಗುರುವಾರ, 1 ಸೆಪ್ಟಂಬರ್ 2022 (09:07 IST)
ಲಕ್ನೋ : ಚಿಕ್ಕಪ್ಪನೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಅವಳನ್ನು ಗರ್ಭಿಣಿಯಾಗಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಉತ್ತರಾಖಂಡದ ವಲಸೆ ಕಾರ್ಮಿಕನೊಬ್ಬ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ್ದಾನೆ. ಇದರ ಪರಿಣಾಮ ಬಾಲಕಿಯು ಗುರುಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಬಾಲಕಿ ಹಾಗೂ ಅವಳ ತಂದೆ, ತಾಯಿ ವಾಸಿಸುತ್ತಿದ್ದರು. ಬಾಲಕಿಯ ತಂದೆ, ತಾಯಿಯಿಬ್ಬರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ಅಲ್ಲೇ ಪಕ್ಕ ಮನೆಯಲ್ಲಿ ವಾಸಿಸುತ್ತಿದ್ದ ಆಕೆಯ ಚಿಕ್ಕಪ್ಪ ಬಾಲಕಿಯನ್ನು ಯಾವುದೋ ನೆಪ ಹೇಳಿ ಮನೆಗೆ ಕರೆದಿದ್ದಾನೆ. ನಂತರ ಅಲ್ಲಿ ಅತ್ಯಾಚಾರವೆಸಗಿದ್ದಾನೆ. 

ಕೆಲ ತಿಂಗಳ ಬಳಿಕ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಬಾಲಕಿಯನ್ನು ಅಲ್ಲಿಯೇ ಹತ್ತಿರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಆಕೆಯ ತಾಯಿ ಕರೆದೊಯ್ದಿದ್ದಾರೆ. ಅಲ್ಲಿ ಬಾಲಕಿ ಗರ್ಭಿಣಿ ಆಗಿರುವ ವಿಷಯವನ್ನು ತಾಯಿಗೆ ತಿಳಿದಿದೆ. ಇದಾದ ನಂತರ ಬಾಲಕಿಯು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ