ಹೈದರಾಬಾದ್ : ಇತ್ತೀಚೆಗೆ ಸಣ್ಣ-ಪುಟ್ಟ ವಿಚಾರಕ್ಕೆಲ್ಲ ಮದುವೆಗಳು ಮುರಿದಿರುವುದನ್ನು ನಾವು ಕಾಣುತ್ತೇವೆ.
ಅಂತೆಯೇ ಹೈದರಾಬಾದ್ನಲ್ಲಿ ವರನೊಬ್ಬ ತನಗೆ ವಧು ಕಡೆಯವರು ವರದಕ್ಷಿಣೆ ಎಂದು ಹಳೆಯ ಬೆಡ್ ನೀಡಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡ ಪ್ರಸಂಗ ನಡೆದಿದೆ.
ಇತ್ತ ಮದುವೆ ಮುರಿದ ವರನ ವಿರುದ್ಧ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವರ ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.