ಮಗಳ ಎದುರೇ ಇಟ್ಟಿಗೆಯಿಂದ ಹೊಡೆದು ಪತ್ನಿ ಕೊಂದ ಪತಿ!
ಮೃತಳನ್ನು ಇಶಾ ದೇವಿ (26) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ತನ್ನ ಪತಿ ಪಂಕಜ್ ಯಾದವ್ ಜೊತೆ ಇಶಾ ದೇವಿಗೆ ಜಗಳವಾಗಿದೆ.
ವಾಗ್ವಾದದ ವೇಳೆ ಪಂಕಜ್ ಕೋಪದಿಂದ ಇಟ್ಟಿಗೆಯನ್ನು ಎತ್ತಿಕೊಂಡು ಆಕೆಯ ತಲೆ ಮತ್ತು ಮುಖಕ್ಕೆ ಪದೇ ಪದೇ ಹೊಡೆದು ಸ್ಥಳದಲ್ಲೇ ಆಕೆಯನ್ನು ಕೊಂದಿದ್ದಾನೆ. ಕೊಲೆಯ ನಂತರ ತನ್ನ ಹೆಂಡತಿಯ ಶವವನ್ನು ಹತ್ತಿರದ ತೋಟದಲ್ಲಿ ಎಸೆದಿದ್ದಾನೆ.
ಆಕೆಯ ನಾಲ್ಕು ವರ್ಷದ ಮಗಳ ಎದುರೇ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಂಡತಿಯನ್ನು ಕೊಂದು ಆರೋಪಿ ಪರಾರಿಯಾಗಿದ್ದಾನೆ. ಕೊಲೆ ಬಗ್ಗೆ ಆತನ ಮಗಳು ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.