ನೂತನ ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಜೋರು

ಶುಕ್ರವಾರ, 26 ಮೇ 2023 (09:02 IST)
ನವದೆಹಲಿ : ನೂತನ ಸಂಸತ್ ಭವನದ ಪ್ರಾರಂಭೋತ್ಸವದ ವಿಚಾರವಾಗಿ ಆಡಳಿತ ಮತ್ತ ವಿಪಕ್ಷಗಳ ಮಧ್ಯೆ ರಾಜಕೀಯ ಸಂಘರ್ಷ ಜೋರಾಗಿದೆ.
 
ಲೋಕಾರ್ಪಣೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ ರಾಜಕೀಯ ಪಕ್ಷಗಳ ಸಂಖ್ಯೆ ಈಗ 21 ಆಗಿದೆ. ವಿಪಕ್ಷಗಳ ಈ ಬಹಿಷ್ಕಾರ ತಂತ್ರಕ್ಕೆ ಓಆಂ ಮೈತ್ರಿಕೂಟದ ಪಕ್ಷಗಳು ಸೆಡ್ಡು ಹೊಡೆದಿವೆ. ಸಂವಿಧಾನದ ಮೌಲ್ಯಗಳಿಗೆ ವಿರೋಧ ಪಕ್ಷಗಳು ತಿಲಾಂಜಲಿ ಹಾಡಿವೆ ಎಂದು ಆಕ್ರೋಶ ಹೊರಹಾಕಿವೆ.

ಎನ್ಡಿಎಯೇತರ ಪಕ್ಷಗಳಾದ ಜೆಡಿಎಸ್, ಬಿಎಸ್ಪಿ, ಶಿರೋಮಣಿ ಅಕಾಲಿದಳ, ಬಿಜೆಡಿ, ವೈಎಸ್ಆರ್ಸಿಪಿ, ಟಿಡಿಪಿ ಪಕ್ಷಗಳು ಸಂಸತ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಸ್ಪಷ್ಟಪಡಿಸಿವೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕೂಡ ದೆಹಲಿಗೆ ತೆರಳಲಿದ್ದಾರೆ. ಇನ್ನೂ ವಿಪಕ್ಷಗಳ ಬಹಿಷ್ಕಾರ ನಡೆಗೆ ಪ್ರಧಾನಿ ಮೋದಿ ಕೌಂಟರ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ