ನಿರ್ಭಯಾ ಕೇಸ್; ಕೊನೆಯ ಇಚ್ಛೆ ಕುರಿತು ಬಾಯಿಬಿಡದ ಅಪರಾಧಿಗಳು

ಶುಕ್ರವಾರ, 20 ಮಾರ್ಚ್ 2020 (07:27 IST)
ನವದೆಹಲಿ: ಏಳು ವರ್ಷಗಳ ನಿರ್ಭಯಾ ಪ್ರಕರಣಕ್ಕೆ ಇಂದು ನ್ಯಾಯ ಸಿಕ್ಕಿದೆ. ಇಂದು ಬೆಳಿಗ್ಗೆ 5.30ಕ್ಕೆ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ಜಾರಿಯಾಗಿದೆ. ಅಪರಾಧಿಗಳ ಕೊನೆಯ ಇಚ್ಛೆ ಕುರಿತು ಏನನ್ನೂ ಕೂಡ ಹೇಳಲಿಲ್ಲ ಎಂದು ಜೈಲು ಅಧೀಕ್ಷರು ಕಾರಾಗೃಹದ ಐಜಿಗೆ ವರದಿ ಮಾಡಿದ್ದಾರೆ.

2012ರಲ್ಲಿ ನಡೆದ ಸಾಮಾಹಿಕ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಾಲ್ವರು ಅಪರಾಧಿಗಳಿಗೆ ಇಂದು ಬೆಳಿಗ್ಗೆ 5.30ಕ್ಕೆ ಮರಣದಂಡನೆ ವಿಧಿಸಲಾಗಿದೆ. ಮರಣದಂಡನೆಗೂ ಮೊದಲು ಅಪರಾಧಿಗಳ ಕೊನೆಯ ಇಚ್ಛೆಯ ಕುರಿತು ಜೈಲು ಅಧೀಕ್ಷರು ವಿಚಾರಿಸಿದಾಗ ಕೊನೆಯ ಇಚ್ಛೆ ಏನೆಂದು ಅಪರಾಧಿಗಳು ಹೇಳಲಿಲ್ಲ. ಕುರಿತು ಜೈಲು ಅಧೀಕ್ಷರು ಕಾರಾಗೃಹದ ಐಜಿಗೆ ವರದಿ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ