ಸೋದರ ಸೊಸೆ ಮೇಲೆ ಅತ್ಯಾಚಾರ ಎಸಗಿದ ಯುವಕನನ್ನು ಥಳಿಸಿ ಕೊಂದ ಗ್ರಾಮಸ್ಥರು

ಸೋಮವಾರ, 12 ನವೆಂಬರ್ 2018 (07:20 IST)
ಜಾರ್ಖಂಡ್ : 9 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ 21 ವರ್ಷದ ಯುವಕನೊಬ್ಬನನ್ನು ಗ್ರಾಮಸ್ಥರು ಹಲ್ಲೆ ಮಾಡಿ ಕೊಂದ ಘಟನೆ ಜಾರ್ಖಂಡ್ ನ ವೆಸ್ಟ್ ಸಿಂಗ್ ಭುಮ್ ಗ್ರಾಮವೊಂದರಲ್ಲಿ ನಡೆದಿದೆ.


ಸಂತ್ರಸ್ಥೆ ಯುವಕನ ಸೋದರ ಸೊಸೆಯಾಗಿದ್ದು, ಇಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಂತ್ರಸ್ಥೆ ಒಬ್ಬಳೆ ರೂಂನಲ್ಲಿ ಮಲಗಿದ್ದು, ಆಕೆಯ ತಾಯಿ ಪಕ್ಕದ ರೂಂನಲ್ಲಿದ್ದನ್ನು ಗಮನಿಸಿದ ಯುವಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.  
ಈ ವಿಚಾರ ತಿಳಿಯುತ್ತಿದ್ದಂತೆ  ಸ್ಥಳಕ್ಕೆ ಬಂದ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಆರೋಪಿ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ