ತಿರುವನಂತಪುರಂ : ಸೆಕ್ಸ್ ಗೆ ಒಪ್ಪದ ಪತ್ನಿಯ ಮೇಲೆ ಅಕ್ರಮ ಸಂಬಂಧದ ಅನುಮಾನ ಬಂದು ಪತಿ ಬರ್ಬರವಾಗಿ ಕೊಲೆಗೈದ ಘಟನೆ ಕೇರಳದ ಎರ್ನಾಕುಲಂನ ಪೆರಿಂತಲ್ಮನ್ನಾ ಎಂಬಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ರಫೀಕ್ (35) ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪತ್ನಿ ಫಾತಿಮಾ ಫಹ್ನಾ (30)ಳನ್ನು ಕೊಲೆ ಮಾಡಿದ್ದಾನೆ.
ರಫೀಕ್ ಶನಿವಾರ ರಾತ್ರಿ ಪತ್ನಿಯನ್ನು ಬಟ್ಟೆಯಿಂದ ಮೂಗು-ಬಾಯಿ ಕಟ್ಟಿ ಸಾಯಿಸಿದ್ದಾನೆ. ನಾಲ್ಕೂವರೆ ವರ್ಷದ ಮಗು ಜೊತೆ ದಂಪತಿ ಮಲಗಿದ್ದ ಸಂದರ್ಭದಲ್ಲಿ ಪತಿ ಈ ಕೃತ್ಯ ಎಸಗಿದ್ದಾನೆ. ಪತ್ನಿ ಸೆಕ್ಸ್ ಗೆ ಒಪ್ಪದಿದ್ದರಿಂದ ಸಿಟ್ಟುಗೊಂಡ ಪತಿ ರಫೀಕ್ ಆಕೆಗೆ ಬೇರೊಬ್ಬನ ಜೊತೆ ಸಂಬಂಧ ಇರಬೇಕು ಎಂದು ಶಂಕಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.