ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿದ ಪ್ರಧಾನಿ ಮೋದಿ ನಿರ್ಧಾರವನ್ನು ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆ

ಬುಧವಾರ, 15 ಏಪ್ರಿಲ್ 2020 (07:11 IST)

ನವದೆಹಲಿ : ಪ್ರಧಾನಿ ಮೋದಿ ಲಾಕ್ ಡೌನ್ ನ್ನು ಮೇ 3ರವರೆಗೆ ವಿಸ್ತರಿಸಿದ್ದಕ್ಕೆ  ಪ್ರಧಾನಿ ಮೋದಿಯವರ ನಿರ್ಧಾರ ಕಠಿಣ ಮತ್ತು ಸಮಯೋಚಿತ ಎಂದು  ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.
 


 

ಕೊರೊನಾ ವೈರಸ್ ವಿರುದ್ಧ ಹೋರಾಟಲು ದೇಶವನ್ನು ಮೇ3ರವರೆಗೆ ಲಾಕ್ ಡೌನ್ ಮಾಡಿರುವುದು ಕಠಿಣ ಮತ್ತು ಸಮಯೋಚಿತ ತೀರ್ಮಾನವಾಗಿದೆ. ಈಗಲೇ ಅಂಕಿಅಂಶಗಳ ಬಗ್ಗೆ ಮಾತನಾಡಬಾರದು.  ಆದರೆ 6 ವಾರಗಳು ದೇಶವನ್ನು ಲಾಕ್ ಡೌನ್ ಮಾಡುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಮಯವಾಗುತ್ತದೆ. ಹಾಗೇ ಹೊಸ ಹೊಸ ಪ್ರಕರಣಗಳನ್ನು ಪತ್ತೆ ಹಚ್ಚಲು ಅವರನ್ನು ಐಸೊಲೇಷನ್ ಮಾಡಲು ವೈರಸ್ ನ್ನು ತಡೆಗಟ್ಟಲು ಬಹಳ ಉಪಯೋಗವಾಗುತ್ತದೆ ಎಂದು  ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೆಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ