OMG:ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತ..

ಗುರುವಾರ, 25 ಮೇ 2017 (12:01 IST)
ನವದೆಹಲಿ:ಭಾರತ ಈಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಈ ವರೆಗೆ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಖ್ಯಾತಿ ಪಡೆದಿದ್ದ ಚೀನಾ ಇದೀಗ ಆ ಪಟ್ಟದಿಂದ ಕೆಳಗಿಳಿದಿದ್ದು, ಭಾರತಕ್ಕೆ ಆ ಪಟ್ಟ ಲಭಿಸಿದೆ ಎಂದು  ಸಂಶೋಧಕರೊಬ್ಬರು ಹೇಳಿದ್ದಾರೆ. 
 
ಅಮೆರಿಕದ ಖ್ಯಾತ ವಿಸ್ಕಿನ್ಸನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಸಂಶೋಧಕ ಯಿ ಫುಕ್ಸಿಯಾನ್ ಎಂಬುವವರು ಇಂತಹುದೊಂದು ವಾದ ಮಂಡಿಸಿದ್ದು, ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ  ರಾಷ್ಟ್ರ ಚೀನಾ ಅಲ್ಲ ಬದಲಿಗೆ ಭಾರತ ಎಂದು ಹೇಳಿದ್ದಾರೆ.
 
ಇತ್ತೀಚೆಗೆ ಚೀನಾದ ಪೆಕಿಂಗ್ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ವಿಚಾರಸಂಕಿರಣದಲ್ಲಿ ಪಾಲ್ಗೊಂಡಿದ್ದ ಅವರು, ಚೀನಾ ದೇಶದಲ್ಲಿ 1991 ರಿಂದ 2016 ರ ಅವಧಿಯಲ್ಲಿ 377.6 ಮಿಲಿಯನ್ ಮಕ್ಕಳು ಜನಿಸಿದೆ. ಆದರೆ ಅಧಿಕೃತ  ದಾಖಲೆಗಳಲ್ಲಿ ಈ ಸಂಖ್ಯೆಯನ್ನು 464.8 ಮಿಲಿಯನ್ ಎಂದು ತೋರಿಸಲಾಗಿದೆ. ಈ ಅಂಕಿ ಅಂಶಗಳ ಪ್ರಕಾರ ಪ್ರಸ್ತುತ ಇರುವ ಚೀನಾ ಜನಸಂಖ್ಯೆ1.38 ಬಿಲಿಯನ್ ಎಂಬುದು ತಪ್ಪು ವಾದವಾಗಿದೆ. ಈ ಅಂಕಿಗಳ ಅಂಶಗಳಲ್ಲಿ 90  ಮಿಲಿಯನ್ ಸಂಖ್ಯೆ ಕಡಿತವಾಗಬೇಕಿದ್ದು, ನೈಜ ಅಂಕಿ ಅಂಶಗಳ ಪ್ರಕಾರ ಚೀನಾ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಲ್ಲ ಎಂದು ಅವರು ಹೇಳಿದ್ದಾರೆ.
 
ನನ್ನ ಪ್ರಕಾರ ಚೀನಾದಲ್ಲಿ 1.29 ಬಿಲಿಯನ್ ಜನಸಂಖ್ಯೆ ಇದ್ದು, ಭಾರತದಲ್ಲಿ 1.32 ಬಿಲಿಯನ್ ಜನಸಂಖ್ಯೆ ಇದೆ. ಹೀಗಾಗಿ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತ ಎಂದು ಫುಕ್ಸಿಯನ್ ವಾದಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ