ಯುವತಿಯನ್ನು ದಿಟ್ಟಿಸಿ ನೋಡಿದ್ದಕ್ಕೆ ಯುವಕನಿಗೆ ಆಯ್ತು ಈ ಗತಿ!

ಶುಕ್ರವಾರ, 27 ನವೆಂಬರ್ 2020 (06:13 IST)
ಜೈಪುರ : 33 ವರ್ಷದ ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಮಗನಿಗೆ 26 ವರ್ಷದ ವ್ಯಕ್ತಿಯನ್ನು ಇರಿದು ಕೊಲೆ ಮಾಡಲು ಸಹಾಯ ಮಾಡಿದ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯ ಸಂಬಂಧಿ ಯುವತಿಯನ್ನು ಸಂತ್ರಸ್ತ ವ್ಯಕ್ತಿ ದಿಟ್ಟಿಸಿ ನೋಡುತ್ತಿದ್ದ. ಅಲ್ಲದೇ ಮಹಿಳೆ ಹಾಗೂ ಸಂತ್ರಸ್ತನಿಗೆ ಹಳೆಯ ದ್ವೇಷವಿತ್ತು. ಈ ಕಾರಣದಿಂದ ಆಕೆ ತನ್ನ ಮಗನಿಗೆ ಸಂತ್ರಸ್ತನಿಗೆ ಕೊಲೆಗೆ ಸಹಕರಿಸಿದ್ದಾಳೆ. ತಾಯಿಯ ಸಹಕಾರದಿಂದ ಮಗ ಸಂತ್ರನಿಗೆ ಹಲವು ಚಾಕುವಿನಿಂದ ಇರಿದಿದ್ದಾನೆ. ತಕ್ಷಣ  ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಈ ಬಗ್ಗೆ ತಾಯಿ ಮತ್ತು ಮಗನ ವಿರುದ್ಧ ದೂರು ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ