ವೃದ್ಧೆಯ ಕಟ್ಟಿ ಹಾಕಿ ಚಿನ್ನ, ಮೊಬೈಲ್ ದೋಚಿದ ಖದೀಮ
65 ವರ್ಷದ ವೃದ್ಧೆ ಮಗಳೊಂದಿಗೆ ವಾಸಿಸುತ್ತಿದ್ದರು. ಮಗಳು ಮನೆಯಿಂದ ಹೊರಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ಮುಸುಕುಧಾರಿ ವ್ಯಕ್ತಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಕೈ ಕಾಲು ಕಟ್ಟಿ ಹಾಕಿದ್ದಾನೆ.
ಬಳಿಕ ಚಿನ್ನಾಭರಣಗಳು ಹಾಗೂ ವೃದ್ಧೆಯ ಬಳಿಯಿದ್ದ ಮೊಬೈಲ್ ಕಸಿದು ಪರಾರಿಯಾಗಿದ್ದಾನೆ. ವೃದ್ಧಯ ಕಿವಿಯೋಲೆಯನ್ನು ಎಳೆಯುವಾಗ ಆಕೆಗೆ ಗಾಯವಾಗಿದ್ದು, ನೆಲದ ಮೇಲೆ ಬಿದ್ದಿದ್ದಾರೆ. ವೃದ್ಧೆಯ ಪರಿಸ್ಥಿತಿ ಗಮನಿಸಿದ ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.