ಕಳಂಕ ತರುವ ಸಂಚು ನಡೆಯುತ್ತಿದೆ : ಮೋದಿ

ಸೋಮವಾರ, 29 ಆಗಸ್ಟ್ 2022 (09:52 IST)
ಗಾಂಧಿನಗರ : ವಿಶ್ವ ಮತ್ತು ದೇಶದಲ್ಲಿ ಗುಜರಾತಿನ ಹೆಸರಿಗೆ ಕಳಂಕ ತರಲು ಸಂಚು ರೂಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಗುಜರಾತ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ವೇಳೆ ಕಛ್ ಜಿಲ್ಲೆಯಲ್ಲಿಂದು ಸುಮಾರು 4,400 ಕೋಟಿ ಮೊತ್ತದ ಯೋಜನೆಗಳಿಗೆ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.

ಅಲ್ಲದೇ 2001ರ ಜನವರಿ 21ರಲ್ಲಿ ಗುಜರಾತ್ನಲ್ಲಿ ನಡೆದಿದ್ದ ಭೂಕಂಪದ ಸಂತ್ರಸ್ತರ ಸ್ಮರಣಾರ್ಥವಾಗಿ ನಿರ್ಮಿಸಿರುವ `ಸ್ಮೃತಿ ವನ ಸ್ಮಾರಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದ್ದಾರೆ.

ವಿಶ್ವದಲ್ಲಿ ಹಾಗೂ ದೇಶದಲ್ಲಿ ಗುಜರಾತ್ ಹೆಸರಿಗೆ ಕಳಂಕ ತರುವ ಕೆಲಸ ನಡೆಯುತ್ತಿದೆ. ರಾಜ್ಯಕ್ಕೆ ಹರಿದುಬರುವ ಬಂಡವಾಳವನ್ನು ತಡೆಯಲು ಸಂಚು ನಡೆಯುತ್ತಿದೆ ಎಂದು ಹೇಳಿದ್ದಾರೆ. 

ದೇಶದಲ್ಲೇ ಮೊದಲ ಬಾರಿಗೆ ವಿಪತ್ತು ನಿರ್ವಹಣಾ ಕಾಯ್ದೆಯನ್ನು ರೂಪಿಸಿದ ರಾಜ್ಯ ಗುಜರಾತ್. ಕೋವಿಡ್ ಸಾಂಕ್ರಾಮಿಕ ನಿರ್ವಹಣೆ ವೇಳೆಯೂ ಆ ಕಾಯ್ದೆ ಉತ್ತೇಜನಕಾರಿ ಆಗಿತ್ತು. ಬಂಡವಾಳಕ್ಕೆ ತಡೆ ಒಡ್ಡುವ ಎಲ್ಲಾ ರೀತಿಯ ಸಂಚುಗಳನ್ನೂ ವಿಫಲಗೊಳಿಸಿ ಗುಜರಾತ್ ಮತ್ತು ಕಛ್ ಅಭಿವೃದ್ಧಿ ಹೊಂದಿದವು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ