ಸರ್ಜಿಕಲ್ ಸ್ಟ್ರೈಕ್ ಬಳಿಕ ಗಡಿ ನುಸುಳುವಿಕೆ ಕಡಿಮೆಯಾಗಿದೆ: ರಾಜನಾಥ್ ಸಿಂಗ್

ಗುರುವಾರ, 1 ಜೂನ್ 2017 (14:20 IST)
ನವದೆಹಲಿ:ಕೆಲ ತಿಂಗಳಿನಿಂದ ಉಗ್ರರ ಗಡಿ ನುಸುಳುವಿಕೆ ಕಡಿಮೆಯಾಗಿದ್ದು, ಗಡಿಯಲ್ಲಿ ಭಾರತೀಯ ಯೋಧರ ಕಾರ್ಯನಿರ್ವಹಣೆ ಶಾಘನೀಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
 
ಬಿಎಸ್ಎಫ್ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜನಾಥ ಸಿಂಗ್, ಈ ಹಿಂದೆ ಪಾಕಿಸ್ತಾನದಿಂದ ಗಡಿ ನುಸುಳುವಿಕೆ ಪ್ರಕರಣಗಳು ಹೆಚ್ಚಾಗಿದ್ದವು, ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಸೇನಾ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತರ ಒಳನುಸುಳುವಿಕೆ ಪ್ರಕರಣಗಳು ಕಡಿಮೆಯಾಗಿದೆ ಎಂದರು.
 
ಗಡಿ ಕಾವಲು ಪಡೆ, ಗುಪ್ತಚರ ಜಾಲ ಮತ್ತು ಪೊಲೀಸ್ ರನ್ನು ನಿಯೋಜಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂರು ವ್ಯವಸ್ಥೆಯಿಂದ ಗಡಿಯಲ್ಲಿ ಭದ್ರತೆ ಇನ್ನಷ್ಟು ಹೆಚ್ಚಾಗಲಿದೆ. ದೇಶದ ಹಿತಾಸಕ್ತಿ ವಿಚಾರಕ್ಕೆ ಬಂದರೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ