`ಮುಸಲ್ಮಾನರೂ ಯೋಗ ಮಾಡಬಹದು, ಯಾವುದೇ ವಿವಾದವಿಲ್ಲ'

ಗುರುವಾರ, 25 ಮೇ 2017 (15:09 IST)
ಮುಸಲ್ಮಾನರೂ ಯೋಗ ಮಾಡಬಹುದು, ಅದರಲ್ಲಿ ಯಾವುದೇ ವಿವಾದವಿಲ್ಲ  ಎಂದು ಲಖನೌದಲ್ಲಿ  ಸುನ್ನಿ ಸಮುದಾಯದ ಪ್ರಧಾನ ಮೌಲ್ವಿಯೊಬ್ಬರು ಹೇಳಿದ್ದಾರೆ.
 

ಯೋಗ ಆರೋಗ್ಯಕ್ಕೆ ಉತ್ತಮವಾದದ್ದು, ಅದನ್ನ ಎಲ್ಲರೂ ಅಭ್ಯಾಸ ಮಾಡಬೇಕು. ಯೋಗ ಒಂದು ರೀತಿಯ ಪೂಜೆಯ ವಿಧಾನ ಎಂಬ ಸಂಶಯದ ಹಿನ್ನೆಲೆಯಲ್ಲಿ ಮುಸಲ್ಮಾನರು ಯೋಗದಿಂದ ದೂರು ಉಳಿದಿದ್ದಾರೆ. ಯೋಗಕ್ಕೂ ಪೂಜೆಗೂ ಸಂಬಂಧವಿಲ್ಲ ಎಂದು ಅಖಿಲ ಭಾರತ ಮುಸ್ಲೀಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರಾದ ಮೌಲ್ವಿ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಲಿ ಹೇಳಿದ್ದಾರೆ.

ವರದಿಗಳ ಪ್ರಕಾರ ಜೂನ್ 21ರಂದು, ಲಖನೌದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ, ಸಿಎಂ ಯೋಗಿ ಆದಿತ್ಯಾನಾಥ್ ನೇತೃತ್ವದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ 300ಕ್ಕೂ ಅಧಿಕ ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಸೇರಿದಂತೆ 55000 ಜನ ಸಾಮೂಹಿಕ ಯೋಗ ಮಾಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ