ಅಪ್ಪನ ಅಂತ್ಯಕ್ರಿಯೆಗೆ ಹೋಗಿದ್ದಾಗ ವ್ಯಕ್ತಿಯ ಮನೆಗೆ ಕನ್ನ ಹಾಕಿದ ಖದೀಮರು
ಭಾಸ್ಕರ್ ದರಡೆ ಎನ್ನುವವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತಾವು ಅಪ್ಪನ ಅಂತ್ಯಕ್ರಿಯೆಗೆಂದು ಊರಿಗೆ ತೆರಳಿದ್ದಾಗ ಮನೆಗೆ ಖದೀಮರು ನುಗ್ಗಿ 2.19 ಲಕ್ಷ ರೂ. ದೋಚಿದ್ದಾರೆಂದು ದೂರಿದ್ದಾರೆ.
ಅಷ್ಟೇ ಅಲ್ಲದೆ, ನಗದಿನ ಜತೆಗೆ ಚಿನ್ನಾಭರಣ, ಎಲ್ ಇಡಿ ಟಿವಿಯನ್ನೂ ಹೊತ್ತೊಯ್ದಿದ್ದಾರೆ. ಊರಿನಿಂದ ಮನೆಗೆ ಮರಳಿದಾಗ ಮುಖ್ಯಧ್ವಾರದ ಬೀಗ ಮುರಿದ ಸ್ಥಿತಿಯಲ್ಲಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.