ಲೋನ್ ಗಾಗಿ ಸೆಕ್ಸ್ ಗೆ ಒತ್ತಾಯಿಸಿದ್ದಕ್ಕೆ ಬ್ಯಾಂಕ್ ಅಧಿಕಾರಿಗೆ ದೊಣ್ಣೆ ರುಚಿ ತೋರಿಸಿದ ಮಹಿಳೆ
ಡಿಎಚ್ಎಫ್ಎಲ್ ಬ್ಯಾಂಕ್ ಮ್ಯಾನೇಜರ್ ದೇವಯ್ಯ ಮೇಲೆ ಆಪಾದನೆ ಕೇಳಿ ಬಂದಿದ್ದು, ಸೆಕ್ಸ್ ಗೆ ಒತ್ತಾಯಿಸಿದ ಈತನ ಮೇಲೆ ಸಾಲ ಪಡೆಯಲು ಬಂದಿದ್ದ ಮಹಿಳೆ ಎಳೆದಾಡಿ ದೊಣ್ಣೆಯಿಂದ ಥಳಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆ 2 ಲಕ್ಷ ರೂ. ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಈ ಸಾಲ ವಿಚಾರವಾಗಿ ದಾಖಲೆಗಳನ್ನು ಪರಿಶೀಲಿಸಲು ದೇವಯ್ಯ ಮಹಿಳೆಯನ್ನು ಮನೆಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದ.