ಕುಟುಂಬದ ಸದಸ್ಯರು ಸಹೋದರ ಮತ್ತು ಸಹೋದರಿಯನ್ನು ಕರೆಸಿ ಪೊಲೀಸ್ ಠಾಣೆಯಲ್ಲಿ ಬುದ್ದಿವಾದ ಹೇಳಲು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರು ವಯಸ್ಕರಾಗಿರುವುದರಿಂದ ಅವರ ವಿವಾಹವನ್ನು ತಡೆಯಲು ಕಾನೂನಿಗೂ ಸಾಧ್ಯವಿಲ್ಲ ಎಂದು ಪೊಲೀಸರು ಕೂಡಾ ಅಸಹಾಯಕರಾಗಿದ್ದಾರೆ.
ಸಮಾಜ ಮತ್ತು ಕುಟುಂಬ ನಮ್ಮ ಸಂಬಂಧವನ್ನು ಒಪ್ಪುವುದಿಲ್ಲ ಎಂದು ತಿಳಿದಿದ್ದ ಇಬ್ಬರು ಪೊಲೀಸ್ ಠಾಣೆಗೆ ಕೆರಳಿ ಸಹಾಯ ಯಾಚಿಸಿದ್ದಾರೆ. ವಿಚಾರಣೆಯಲ್ಲಿ ಇಬ್ಬರು ಸಹೋದರ, ಸಹೋದರಿ ಎಂದು ತಿಳಿದ ಪೊಲೀಸರು ಇಬ್ಬರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ವಿಫಲವಾಗಿದ್ದಾರೆ.