ಈ ಗ್ರಾಮದಲ್ಲಿ ಹೆಂಡತಿ ಬಾಡಿಗೆಗೆ ದೊರೆಯುತ್ತಾಳೆ..! ನಿಮಗೆ ಗೊತ್ತಾ?

ಶನಿವಾರ, 11 ನವೆಂಬರ್ 2017 (16:29 IST)
ಹೆಂಡತಿಯರು ಬಾಡಿಗೆಗೆ ದೊರಕುತ್ತಾರೆಂದರೆ ನೀವು ನಂಬುವಿರಾ? ಇಲ್ಲೊಂದು ಕಂಡು ಕೇಳರಿಯದ ಕೀಳು ಪದ್ದತಿ ಇವತ್ತಿಗೂ ಜಾರಿಯಲ್ಲಿದೆ.
ಭಾರತದಲ್ಲಿ ಮಹಿಳೆಯರನ್ನು ಗೌರವಿಸುವ, ಆರಾಧಿಸುವ, ಪೂಜಿಸುವ ನಮ್ಮ ಸಂಪ್ರದಾಯ ಜಗತ್ತಿನಲ್ಲಿಯೇ ಆದರ್ಶಪ್ರಾಯವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರ ಎನ್ನುವ ಟ್ಯಾಗ್ ಹೊಂದಿರುವ ಭಾರತವು, ಮಹಿಳೆಯರ ಕಡೆಗಿನ ದೃಷ್ಟಿಕೋನದಲ್ಲಿ ಇನ್ನೂ ಹಿಂದುಳಿದಿದೆ ಎನ್ನುವುದು ಜಗತ್ತಿನಲ್ಲಿರುವ ಎಲ್ಲರಿಗೂ ಈಗ ತಿಳಿದಿದೆ. ಆದರೆ, ಈ ಸುದ್ದಿಯನ್ನು ಓದಿದ ನಂತರ ನಾವು ಯಾವ ಪುರಾತನ ಕಾಲದಲ್ಲಿದ್ದೇವೆ ಎನ್ನುವುದು ಅನಾವರಣಗೊಳ್ಳುತ್ತದೆ.
 
ಮಧ್ಯಪ್ರದೇಶದ ಹಳ್ಳಿಯ ಒಂದು ಕಥೆ ಇಲ್ಲಿದೆ. ಸಂಗಾತಿಯನ್ನು ಹುಡುಕುವಲ್ಲಿ ವಿಫಲರಾದ ಶ್ರೀಮಂತ ವ್ಯಕ್ತಿ ಅಥವಾ ಮೇಲ್ವರ್ಗದ ಪುರುಷರಿಗೆ ಇಲ್ಲಿ ಮಹಿಳೆಯರನ್ನು ಬಾಡಿಗೆಗೆ ನೀಡಲಾಗುತ್ತದೆ. ಮಹಿಳೆಯನ್ನು ತಿಂಗಳಿಗೆ ಅಥವಾ ವಾರ್ಷಿಕ ಬಾಡಿಗೆ ಆಧಾರದ ಮೇಲೆ ಹೆಂಡತಿಯಾಗಿ ಕಾರ್ಯನಿರ್ವಹಿಸುತ್ತಾಳೆ. ಮಹಿಳೆ ನಿರ್ಜೀವ ವಸ್ತುವಿನಂತೆ ವ್ಯಾಪಾರದಲ್ಲಿ ಭಾಗಿಯಾಗುತ್ತಾಳೆ ಎನ್ನುವುದೇ ವಿಪರ್ಯಾಸ.
 
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಸ್ಟಾಂಪ್ ಕಾಗದದ ಮೇಲೆ ಬಾಡಿಗೆ ಹೆಂಡತಿಯನ್ನು ಗುತ್ತಿಗೆಗೆ ಪಡೆಯುವ ಬಗ್ಗೆ ಸಹಿ ಹಾಕಲಾಗುತ್ತದೆ. 10, ರೂ, 100 ಮೌಲ್ಯದ ಸ್ಟ್ಯಾಂಪ್ ಕಾಗದದ ಮೇಲೆ ಅಂಚೆಚೀಟಿಗಳ ಲಗತ್ತಿಸಿ, ಬೇರೆ ಪುರುಷರಿಗೆ ಹಸ್ತಾಂತರ ಮಾಡಲಾಗುತ್ತದೆ. ಇಲ್ಲಿ ಮಹಿಳೆಯರನ್ನು ಮಾರಾಟ ಮಾಡುವ ಮಾರುಕಟ್ಟೆ ಇದ್ದು ಸಾಲಾಗಿ ನಿಂತ ಮಹಿಳೆಯರ ಅಂದ ಚಂದ ನೋಡಿ ಪುರುಷರು ಖರೀದಿ ದರ ನಿಗದಿಪಡಿಸುತ್ತಾರೆ.
 
ಬಾಡಿಗೆಗೆ ಪಡೆದ ಮಹಿಳೆಯ ಒಪ್ಪಂದ ಪೂರ್ಣಗೊಂಡ ನಂತರ ಬೇರೆ ಪುರುಷನ ಹೆಂಡತಿಯಾಗಿ ಜೀವನ ಸಾಗಿಸುತ್ತಾಳೆ. ಕೆಲ ಬಾರಿ ಮಹಿಳೆ ಹೆಚ್ಚಿಗೆ ಬಾಡಿಗೆ ಪಡೆದು ದೀರ್ಘಾವಧಿಯವರೆಗೆ ಹೊಸ ಗಂಡನೊಂದಿಗೆ ಜೀವನ ಸಾಗಿಸಬಹುದಾಗಿದೆ. 
 
ಈ ಹೆಂಡತಿ ಬಾಡಿಗೆ ಪಡೆಯುವ ಸಂಗತಿ ಕೇವಲ ಮಧ್ಯಪ್ರದೇಶಕ್ಕೆ ಸೀಮಿತವಾಗಿಲ್ಲ.  ಗುಜರಾತ್‌ನಲ್ಲೂ ವರದಿಯಾಗಿದೆ. ಹೆಣ್ಣು ಶಿಶುಹತ್ಯೆಯ ಕಾರಣದಿಂದಾಗಿ ಮಹಿಳೆಯರ ಕೊರತೆ ಹೆಚ್ಚಾಗುತ್ತಿದೆ, ಗುಜರಾತ್‌ನಲ್ಲಿ ಕೃಷಿಕನಾಗಿರುವ ವ್ಯಕ್ತಿ ತನ್ನ ಪತ್ನಿ ಲಕ್ಷ್ಮಿಯನ್ನು ಜಮೀನುದಾರನಿಗೆ ಒಂದು ತಿಂಗಳಗಳ ಕಾಲ ಬಾಡಿಗೆಗೆ ನೀಡಿದ್ದಾನೆ. ಇದರಿಂದಾಗಿ ಕೃಷಿಕನ ಒಂದು ತಿಂಗಳ ವೇತನ 8 ಸಾವಿರವಾದರೆ, 80, ಸಾವಿರ ರೂಪಾಯಿ ಪಡೆದು ಹೆಂಡತಿಯನ್ನು ಬಾಡಿಗೆಗೆ ನೀಡಿದ್ದಾನೆ.
 
 ಈ ವ್ಯವಹಾರದ ಒಪ್ಪಂದದ ಪ್ರಕಾರ, ಬಾಡಿಗೆ ಹೆಂಡತಿ ಜಮೀನುದಾರನೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳಲು ಮತ್ತು ಕುಟುಂಬದ ಆರೈಕೆಯನ್ನೂ ಸಹ ಮಾಡಬೇಕು. ಇದು ಗುಜರಾತ್- ಮಧ್ಯಪ್ರದೇಶಗಳಲ್ಲಿ ಅನೇಕ ಗ್ರಾಮಸ್ಥರಿಗೆ ಇದು ಲಾಭದಾಯಕ ವ್ಯಾಪಾರ ಅವಕಾಶವಾಗಿದೆ. ಕೆಲವು ಸಂದರ್ಭಗಳಲ್ಲಿ ಮಹಿಳೆಯರನ್ನು 500 ರೂಪಾಯಿಗಳಿಗೂ ಕಡಿಮೆ ದರದಲ್ಲಿ ಮಾರಲಾಗುತ್ತದೆ. ಕೆಲವು ಕುಟುಂಬಗಳಲ್ಲಿ ಪುರುಷರಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆಯಾಗಲು 50,000 ರೂ ವಧು ದಕ್ಷಿಣೆ ಪಡೆಯಲಾಗುತ್ತದೆ.
 
ಇಲ್ಲಿ ಕುಸಿದ ಸ್ತ್ರೀ ಜನಸಂಖ್ಯೆಯ ಹೊರತಾಗಿ. ಇಂತಹ ವ್ಯವಹಾರಗಳನ್ನು ಮಹಿಳೆಯ ಕುಟುಂಬದ ಬಡತನದ ಬೇಗೆಯನ್ನು ದೂರವಾಗಿಸಲು ಪ್ರೋತ್ಸಾಹಿಸುವ ಮಧ್ಯಪ್ರವೇಶಿಗಳು ಅಥವಾ ಮಧ್ಯವರ್ತಿಗಳು. ಬುಡಕಟ್ಟು ಕುಟುಂಬಗಳು ಇಂತಹ ಅಭ್ಯಾಸಗಳಲ್ಲಿ ಭಾಗಿಯಾಗಿವೆ ಎನ್ನಲಾಗುತ್ತಿದೆ.
 
ಮಹಿಳೆಯರನ್ನು ಬಾಡಿಗೆ ಹೆಂಡತಿಯಾಗಿ ಮಾರಾಟ ಮಾಡುವ ಬಗ್ಗೆ ಪೊಲೀಸರಿಗೆ ತಿಳಿದಿದೆ. ಆದರೆ, ಯಾರೂ ದೂರು ನೀಡದ ಹಿನ್ನೆಲೆಯಲ್ಲಿ ಅಸಹಾಯಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ