ಮಾರುವೇಷದಲ್ಲಿ ಬಂದು ಕೇರಳ ಸಂತ್ರಸ್ತರಿಗೆ ನೆರವಾದ ಆ ವ್ಯಕ್ತಿ ಯಾರು ಗೊತ್ತಾ?!

ಶುಕ್ರವಾರ, 7 ಸೆಪ್ಟಂಬರ್ 2018 (08:57 IST)
ತಿರುವನಂತಪುರಂ: ಇತ್ತೀಚೆಗಿನ ದಿನಗಳಲ್ಲಿ ಅಧಿಕಾರ ಸಿಕ್ಕಿತೆಂದರೆ ತಾನು ನಿಂತ ನೆಲ ಮರೆಯುವವರೇ ಹೆಚ್ಚು. ಅಂತಹದ್ದರಲ್ಲಿ ಈ ಐಎಎಸ್ ಅಧಿಕಾರಿ ತವರಿನ ಋಣ ತೀರಿಸಿದ ಕತೆ ಕೇಳಿದರೆ ಹೆಮ್ಮೆಯೆನಿಸುತ್ತದೆ.

ಕಣ್ಣನ್ ಗೋಪಿನಾಥನ್ ಎಂಬ ಕೇರಳ ಮೂಲದ ಐಎಎಸ್ ಅಧಿಕಾರಿ ಇದೀಗ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಜಿಲ್ಲಾಧಿಕಾರಿ. ಆದರೆ ಅವರು ತಮ್ಮ ತವರು ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಸಂತ್ರಸ್ತರಾದವರಿಗಾಗಿ ತಮ್ಮ ಅಧಿಕಾರ, ಪ್ರತಿಷ್ಟೇಯನ್ನೂ ಮರೆತು ಮೂಟೆ ಹೊರುವ ಕೆಲಸ ಮಾಡಿದ್ದಾರೆ.

ಆಗಸ್ಟ್ 26 ರಂದು ಕೇರಳಕ್ಕೆ ಬಂದು ಕೊಚ್ಚಿ ಬಂದರಿನಲ್ಲಿ ಪರಿಹಾರ ಸಾಮಗ್ರಿಗಗಳನ್ನು ಇಳಿಸಿ ಸಾಮಾನ್ಯ ಮೂಟೆ ಹೊರುವವನಂತೆ ಹೆಗಲ ಮೇಲೆ ಹೊತ್ತು ಸಾಗಿಸಿದ್ದಾರೆ. ಸುಮಾರು ಒಂಭತ್ತು ದಿನ ಪರಿಹಾರ ಕಾರ್ಯ ಮಾಡಿದ ನಂತರ ಇವರು ಐಎಎಸ್ ಅಧಿಕಾರಿ ಎಂದು ಸ್ಥಳೀಯರಿಗೆ ಗೊತ್ತಾಗಿದೆ.

ತಾವು ಜಿಲ್ಲಾಧಿಕಾರಿಯಾಗಿರುವ ಜಿಲ್ಲೆಯ ಪರವಾಗಿ 1 ಕೋಟಿ ರೂ. ಚೆಕ್ ನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಅವರು ತಿರುವನಂತರಪುರಂಗೆ ಬಸ್ ‍ನಲ್ಲಿ ಸಾಗಿ ಅಲ್ಲಿಂದ ಪ್ರವಾಹದಿಂದ ತೀವ್ರ ಸಂಕಷ್ಟದಲ್ಲಿದ್ದ ಚಿಂಗನೂರಿಗೆ ಭೇಟಿ ನೀಡಿ ಅಲ್ಲಿನ ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ.

ಇಷ್ಟೆಲ್ಲಾ ಮಾಡಿದ ಮೇಲೂ ನಾನು ಸಾಮಾನ್ಯ ವ್ಯಕ್ತಿ. ವಿಶೇಷವಾದ್ದೇನೂ ಮಾಡಿಲ್ಲ ಎಂದು ವಿನಮ್ರವಾಗಿ ಹೇಳಿಕೊಂಡಿದ್ದಾರೆ. ಸರ್ಕಾರಿ ಕೆಲಸ ಎಂಬ ಹಣೆಪಟ್ಟಿ ಸಿಕ್ಕ ಕೂಡಲೇ ಮೈಮರೆಯುವರೇ ಇರುವಾಗ ಇಂತಹ ಅಧಿಕಾರಿಗೆ ಸೆಲ್ಯೂಟ್ ನೀಡಲೇಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ