ಕೊನೆಗೂ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆರಂಭದ ಭಾಗ್ಯ!
15 ದಿನಗಳ ಸುದೀರ್ಘ ಬಿಡುವಿನ ನಂತರ ಇಂದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹಾರಾಟಕ್ಕೆ ಸಜ್ಜಾಗಿದ್ದು, ಮಧ್ಯಾಹ್ನ 2 ಗಂಟೆಗೆ ಮೊದಲ ವಿಮಾನ ಹಾರಾಟ ನಡೆಸಲಿದೆ.
ಮಳೆಯಿಂದಾಗಿ ವಿಮಾನ ನಿಲ್ದಾಣದ ತುಂಬಾ ನೀರು ಆವರಿಸಿದ್ದರಿಂದ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಇದಕ್ಕೂ ಮೊದಲು ಆಗಸ್ಟ್ 26 ಕ್ಕೇ ವಿಮಾನ ಹಾರಾಟ ಪುನರಾರಂಭವಾಗುವುದಾಗಿ ಸುದ್ದಿಯಿತ್ತು. ಆದರೆ ಸಿಬ್ಬಂದಿ ವರ್ಗದವರು ಕರ್ತವ್ಯಕ್ಕೆ ಹಾಜರಾಗದೇ ಇದ್ದಿದ್ದರಿಂದ ಮತ್ತು ತೆರವು ಕಾರ್ಯ ಆಗದೇ ಇದ್ದಿದ್ದರಿಂದ ಮೂರು ದಿನ ತಡವಾಗಿ ಆರಂಭವಾಗುತ್ತಿದೆ.