ಮಕ್ಕಳು ಮತ್ತು ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಲು ತೆಲಂಗಾಣದ ಶಾಲೆಯಲ್ಲಿ ಜಾರಿಗೆ ತರಲಾಗಿದೆ ಈ ವಿಧಾನ

ಮಂಗಳವಾರ, 14 ಮೇ 2019 (07:37 IST)
ತೆಲಂಗಾಣ : ತೆಲಂಗಾಣದ ವಿದ್ಯಾರ್ಥಿನಿಯರ ವಸತಿ ಶಾಲೆಯೊಂದರಲ್ಲಿ  ಮಕ್ಕಳು ಮತ್ತು ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಲು ಹೊಸದೊಂದು ನಿಯಮವನ್ನು ಜಾರಿಗೆ ತರಲಾಗಿದೆ.



ತೆಲಂಗಾಣದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರ ಬಾಂಧವ್ಯ ಗಟ್ಟಿಗೊಳಿಸಲು ಅಪ್ಪಿಕೊಳ್ಳಿ ಇಲ್ಲವೇ ಹ್ಯಾಂಡ್ ಶೇಕ್ ಮಾಡಿ ಮಕ್ಕಳನ್ನು ಶಾಲೆಯೊಳಗೆ ಸ್ವಾಗತಿಸಿ ಅನ್ನೋ ಹೊಸ ವಿಧಾನವನ್ನು ಬಳಸಲಾಗಿದೆ.

 

ಈ ಬಗ್ಗೆ ಮಾತನಾಡಿದ ಶಾಲೆಯ ಪ್ರಾಂಶುಪಾಲೆ ರೂಪಾ ಅವರು, ಮಕ್ಕಳಿಗೆ ಒಂದು ಹಗ್ ಕೊಡುವುದರಿಂದ ಅಥವಾ ಹ್ಯಾಂಡ್ ಶೇಕ್ ಮಾಡುವುದರಿಂದ ಅವರ ನೈತಿಕತೆ ಹೆಚ್ಚಿಸಿದಂತಾಗುತ್ತದೆ. ಅಲ್ಲದೆ ಆ ಮಕ್ಕಳಲ್ಲಿ ಆತ್ಮವಿಶ್ವಾಸ, ಸಂತೋಷವನ್ನು ಇಮ್ಮಡಿಗೊಳಿಸಿದಂತಾಗುತ್ತದೆ. ಯೂಟ್ಯೂಬ್ ವಿಡಿಯೋವೊಂದು ನನ್ನ ಮೇಲೆ ಪ್ರಭಾವ ಬೀರಿದ್ದು, ಈ ಐಡಿಯಾಕ್ಕೆ ಚಾಲನೆ ನೀಡಲು ಸಾಧ್ಯವಾಯ್ತು . ಈ ಹೊಸ ಐಡಿಯಾ ಉನ್ನತ ಅಧಿಕಾರಿಗಳ ಪ್ರಶಂಸೆಗೂ ಪಾತ್ರವಾಗಿದೆ ಎಂದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ