ತಿರುಪತಿ ಹೋಗುವವರು ಕೈಯಲ್ಲಿ ಕೋಲು ಹಿಡಿದುಕೊಳ್ಳಿ!?

ಬುಧವಾರ, 16 ಆಗಸ್ಟ್ 2023 (09:56 IST)
ಹೈದರಾಬಾದ್ : ಇನ್ಮುಂದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರು ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗಬಹುದೆಂದು ತಿರುಮಲ ತಿರುಪತಿ ದೇವಸ್ಥಾನ ಹೇಳಿದೆ.
 
ಹೌದು. ಇತ್ತೀಚೆಗೆ 6 ವರ್ಷದ ಬಾಲಕಿ ತಿಮ್ಮಪ್ಪನ ದರ್ಶನ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಟಿಟಿಡಿ ಮುಂಜಾಗ್ರತಾ ಕ್ರಮ ವಹಿಸುತ್ತಿದ್ದು, ಭಕ್ತರು ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗುವಂತೆ ತಿಳಿಸಿದೆ.

ಪಾದಾಚಾರಿ ಮಾರ್ಗವಾಗಿ ದೇವಾಸ್ಥಾನಕ್ಕೆ ಹೋಗುವಾಗ ಯಾತ್ರಾರ್ಥಿಗಳು ಬ್ಯಾಚ್ ಬ್ಯಾಚ್ ಆಗಿ ಹೋಗಬೇಕು. ಅಲ್ಲದೆ ಈ ಬ್ಯಾಚ್ಗೆ ಓರ್ವ ಸೆಕ್ಯುರಿಟಿ ಗಾರ್ಡ್ ಇರಲಿದ್ದಾರೆ ಎಂದು ಕೂಡ ತಿಳಿಸಿದೆ.

ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಕಾಡುಪ್ರಾಣಿಗಳು ದಾಳಿ ಮಾಡಿದರೆ ಅವುಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸಾಧ್ಯವಾದಷ್ಟು ಪ್ರತಿಯೊಬ್ಬ ಯಾತ್ರಿಗೂ ಕೋಲನ್ನು ನೀಡಲಾಗುತ್ತದೆ. ಇನ್ನು ದಾರಿಯಲ್ಲಿ ಹೋಗುವಾಗ ಕೋತಿ ಮುಂತಾದ ಪ್ರಾಣಿಗಳಿಗೆ ಆಹಾರ ನೀಡದಂತೆ ಹಾಗೂ ಕಸ ಹಾಕದಂತೆ ಸೂಚಿಸಲಾಗಿದೆ. ಈ ಮೂಲಕ ಪ್ರಾಣಿಗಳನ್ನು ಆಕರ್ಷಿಸದಂತೆ  ಟಿಟಿಡಿ ಅಧ್ಯಕ್ಷ ಬಿ ಕರುಣಾಕರ್ ರೆಡ್ಡಿ ಹೇಳಿದ್ದಾರೆ.

ದೇವಾಲಯವು ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಪಾದಚಾರಿ ಪ್ರದೇಶಕ್ಕೆ ಬೇಲಿ ಹಾಕುವ ಪ್ರಸ್ತಾವನೆಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಕೆಲವೊಮ್ಮೆ ದೇಗುಲದಲ್ಲಿ ನೂಕುನುಗ್ಗಲು ಕಂಡುಬಂದರೂ ಕೆಲವು ಕ್ರಮಗಳು ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಅಧಿಕಾರಿ ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ