ಮೋದಿ ವಿರುದ್ಧ ಉಗ್ರಪ್ಪ ವಾಗ್ದಾಳಿ

ಗುರುವಾರ, 3 ಆಗಸ್ಟ್ 2023 (14:02 IST)
ರಾಷ್ಟ್ರದಲ್ಲಿ ಶೋಕಿ ಲಾಲ್ ನಾಯಕ ಅಂದ್ರೆ ಅದು ಮೋದಿ ಅವರು ಎಂದು ಮಾಜಿ ಸಂಸದ ಉಗ್ರಪ್ಪ ಅವರು ಹೇಳಿದ್ದಾರೆ. ಈ ಕುರಿತೂ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ ಸ್ವಾತಂತ್ರ್ಯ ಭಾರತದಲ್ಲಿ ಇಂತಹ ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಬಂದಿರಲಿಲ್ಲ.ನಮ್ಮ ಸಹೋದರ,ಸಹೋದರಿಯರು ಮಣಿಪುರದಲ್ಲಿ ಸಾವನ್ನ ಅಪ್ಪುತ್ತಿದ್ದಾರೆ.ಕೆಲವರನ್ನ ಬೆತ್ತಲೆ ಮಾಡಿದ್ದಾರೆ,ಕೆಲವರನ್ನ ಕೊಲೆ ಮಾಡಿದ್ದಾರೆ.ಇದನ್ನ ನೋಡಿದ್ರೆ ಬೇರೆ ದೇಶಗಳು ನಮ್ಮ ದೇಶದ ಬಗ್ಗೆ ಏನ್ ತಿಳಕೊಬಹುದು. ಹರಿಯಾಣ,ಮಣಿಪುರ ಸರ್ಕಾರ ಜನರನ್ನ ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ. ಕುಕಿ,ಮೈತಿಹಿ ಎಂಬ ಸಮುದಾಯಗಳ ನಡುವೆ ವಾರ್ ನಡೆಯುತ್ತಿದೆ.ಪಾರ್ಲಿಮೆಂಟ್ ಗೆ ಪ್ರಧಾನ ಮಂತ್ರಿಗಳು ಗೈರಾಗುತ್ತಾರೆ.ಗಲಭೆ ಸ್ಥಳಕ್ಕೂ ಭೇಟಿ ಕೊಡುವುದಿಲ್ಲ.ಹಾಗಾದ್ರೆ ಪ್ರಧಾನಿಗಳು ಏನ್ ಮಾಡುತ್ತಿದ್ದಾರೆ. ಮಣಿಪುರದಲ್ಲಿನ ಸರ್ಕಾರವನ್ನ ವಜಾಗೊಳಿಸಬೇಕು. ಕೂಡಲೇ ರಾಜ್ಯದಲ್ಲಿ ಶಾಂತಿ ಕಾಪಾಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ