ದೀಪಾವಳಿಗೆ ಪಟಾಕಿ ಹೊಡೆಯಲು ಇಲ್ಲಿ ಮೂರೇ ಗಂಟೆಗೆ ಪರ್ಮಿಟ್!
ಶನಿವಾರ, 14 ಅಕ್ಟೋಬರ್ 2017 (08:21 IST)
ನವದೆಹಲಿ: ದೀಪಾವಳಿ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪಟಾಕಿ ಸಿಡಿಸಬೇಕೇ? ಬೇಡವೇ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ವಾಯು ಮಾಲಿನ್ಯ ತಡೆಗಟ್ಟಲು ಮೂರು ರಾಜ್ಯಗಳಲ್ಲಿ ಮೂರು ಗಂಟೆಗಳ ಕಾಲ ಪಟಾಕಿ ಸಿಡಿಸಲು ಅನುಮತಿಸಲಾಗಿದೆ.
ಪಂಜಾಬ್, ಹರಿಯಾಣ ಮತ್ತು ಚಂಡೀಘಡ ರಾಜ್ಯದಲ್ಲಿ ಸಂಜೆ 6.30 ರಿಂದ ರಾತ್ರಿ 9.30 ರವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಆದರೆ ಅತ್ತ ರಾಷ್ಟ್ರ ರಾಜಧಾನಿಯಲ್ಲಿ ಸಂಪೂರ್ಣವಾಗಿ ಪಟಾಕಿ ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶವಿತ್ತಿದೆ.
ಇದರ ಬೆನ್ನಲ್ಲೇ ಈ ಮೂರೂ ರಾಜ್ಯಗಳ ಹೈಕೋರ್ಟ್ ಈ ಆದೇಶ ನೀಡಿದೆ. ಪಟಾಕಿ ನಿಷೇಧ ಇದೀಗ ವ್ಯಾಪಕರ ಪರ ವಿರೋಧಿ ಚರ್ಚೆಗೂ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ