ವಿ.ಕೆ.ಶಶಿಕಲಾಗೆ ನ್ಯಾಯಾಲಯದಿಂದ ಪೆರೋಲ್ ಮಂಜೂರು

ಶುಕ್ರವಾರ, 6 ಅಕ್ಟೋಬರ್ 2017 (13:05 IST)
ಆಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾಗೆ ಕೋರ್ಟ್ ಪೆರೋಲ್ ಮಂಜೂರು ಮಾಡಿದೆ.
ಪತಿ ನಟರಾಜನ್ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಶಶಿಕಲಾಗೆ ನ್ಯಾಯಾಲಯ ಕೆಲ ಷರತ್ತುಗಳೊಂದಿಗೆ ಆರು ದಿನಗಳ ಪೆರೋಲ್ ಮಂಜೂರು ಮಾಡಿ ಆದೇಶ ಹೊರಡಿಸಿದೆ. 
 
ಪೆರೋಲ್ ಅವಧಿಯಲ್ಲಿ ಶಶಿಕಲಾ ರಾಜಕೀಯ ನಾಯಕರನ್ನು ಭೇಟಿ ಮಾಡುವಂತಿಲ್ಲ. ಯಾವುದೇ ಅಧಿಕಾರಗಳನ್ನು ಸಂಪರ್ಕಿಸುವಂತಿಲ್ಲ. ಯಾವುದೇ ರಾಜಕೀಯ ಸಭೆ ನಡೆಸಬಾರದು ಎಂದು ಷರತ್ತುಗಳನ್ನು ವಿಧಿಸಿದೆ.
 
ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಬೇಕಾದಲ್ಲಿ ಕೂಡಾ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ವಿ.ಕೆ.ಶಶಿಕಲಾಗೆ ಕೋರ್ಟ್ ಷರತ್ತುಗಳ ಮೇರೆಗೆ ಪೆರೋಲ್ ಜಾಮೀನು ಮಾಡಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ