ಇಂದು ಭಾರತ ಹುಣ್ಣಿಮೆ ಸಂಭ್ರಮ

ಬುಧವಾರ, 16 ಫೆಬ್ರವರಿ 2022 (11:46 IST)
ಬೆಳಗಾವಿ : 2 ವರ್ಷಗಳ ಬಳಿಕ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಇಂದು ಭಕ್ತರು ಭಾರತ ಹುಣ್ಣಿಮೆ ಸಂಭ್ರಮಾಚರಣೆ ಮಾಡಲಿದ್ದಾರೆ.

ಜಿಲ್ಲೆಯ ಸವದತ್ತಿ ಹೊರವಲಯದಲ್ಲಿರುವ ಸುಪ್ರಸಿದ್ಧ ದೇವಸ್ಥಾನ ಇದಾಗಿದ್ದು, ಕೋವಿಡ್ ಹಿನ್ನೆಲೆ ದೇವಸ್ಥಾನವು 2 ವರ್ಷಗಳಿಂದ ಬಂದ್ ಆಗಿತ್ತು.

 
ಇಂದು ಸುಮಾರು 10 ರಿಂದ 15 ಲಕ್ಷ ಭಕ್ತರು ಸೇರುವ ನಿರೀಕ್ಷೆಯಿದೆ. ಚಕ್ಕಡಿ, ಕಾರು, ವಿಶೇಷ ಬಸ್‍ಗಳಲ್ಲಿ ತಂಡೋಪತಂಡವಾಗಿ ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ದಂಡು ಹರಿದುಬರುತ್ತಿದೆ.

ಯಲ್ಲಮ್ಮಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಜೋಗುಳಬಾವಿ, ನೂಲಿನ ಗಿರಣಿ ಮಾರ್ಗದಲ್ಲಿ ಬ್ಯಾರಿಕೇಡ್‍ಗಳ ಅಳವಡಿಕೆ ಮಾಡಲಾಗಿದೆ. ಗುಡ್ಡದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಗುಡ್ಡದಲ್ಲಿ 52 ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ. 

ಭಕ್ತರಿಗೆ ಶುದ್ಧ ಕುಡಿಯುವ ನೀರು ಸೇರಿ ಮೂಲಸೌಕರ್ಯಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಸವದತ್ತಿ ಯಲ್ಲಮ್ಮ ದೇವಸ್ಥಾನದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ