OMG...ಟೊಮೆಟೋಗೂ ಕಳ್ಳರ ಭಯ: ಭದ್ರತಾ ಸಿಬ್ಬಂದಿಗಳ ನೇಮಕ...

ಭಾನುವಾರ, 23 ಜುಲೈ 2017 (11:32 IST)
ನವದೆಹಲಿ: ಟೊಮೆಟೋಗೆ ಚಿನ್ನದ ಬೆಲೆ ಬಂದಿದ್ದು, ಮಾರುಕಟ್ಟೆಗಳಲ್ಲಿ ಕೆಜಿ ಟೊಮೆಟೋ 100 ರೂ ಗಡಿ ದಾಟಿದೆ. ಟೊಮೆಟೊಗೆ ಉತ್ತಮ ದರ ಬಂದ ಹಿನ್ನಲೆಯಲ್ಲಿ ಕಳ್ಳರ ಕಣ್ಣು ಟೊಮೆಟೋ ಮೇಲೆ ಬಿದ್ದಿದ್ದು, ಲಕ್ಷಾಂತರ ರೂ ಮೌಲವ್ಯದ ಟೊಮೆಟೋ ದರೋಡೆ ಘಟನೆ ನಡೆಯುತ್ತಿದೆ.
 
ಮುಂಬೈನ ಮಾರುಕಟ್ಟೆಯೊಂದರಲ್ಲಿ 300 ಕೆಜಿ ತೂಕದ ರೂ. 30 ಸಾವಿರ ಮೌಲ್ಯದ ಟೊಮೆಟೋಗಳನ್ನು ದರೋಡೆ ಮಾಡಲಾಗಿದೆ. ಮುಂಬೈನ್ ಶಾಂತಿನಗರ ನಿವಾಸಿಯಾಗಿರುವ ಶಾಂತಿಲಾಲ್ ಶ್ರೀವಾಸ್ತವ್ ಎಂಬುವವರು ಮಾರಾಟಕ್ಕಾಗಿ ನವಿ ಮುಂಬೈ ಎಪಿಎಂಸಿಯಲ್ಲಿ ಟೊಮೆಟೋ ಖರೀದಿಸಿದ್ದರು. ಅಂಗಡಿ ಮುಂದೆ ಇಡಲಾಗಿದ್ದ ಟೊಮೆಟೋಗಳನ್ನು ಖದೀಮರು ರಾತ್ರೋರಾತ್ರಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇದರಿಂದ ಎಚ್ಚೆತ್ತ ಮಾರಾಟಗಾರರು ಈಗ ಟೊಮೆಟೊ ಕಾಯಲು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿದ್ದಾರೆ.
 
ಇನ್ನು ಮಧ್ಯಪ್ರದೇಶದಲ್ಲಿಯೋ ಟೊಮೆಟೊ ಕಳ್ಳತನದ ಆತಂಕ ಎದುರಾಗಿರುವುದರಿಂದ ಭದ್ರತಾಪಡೆಗಳನ್ನು ನಿಯೋಜಿಸಿದ್ದಾರೆ. ಇಂದೋರ್‌‌ನಲ್ಲಿ ಆತಂಕಕ್ಕೊಳಗಾಗಿರುವ ವ್ಯಾಪಾರಿಗಳು ಟೊಮೆಟೊಗೆ ಬಂದೂಕುಧಾರಿಯ ಭದ್ರತೆ ನೀಡಿದ್ದಾರೆ. ಮಾರ್ಕೆಟ್‌‌ಗೆ ಟೊಮೆಟೊ ಟ್ರಕ್‌ಗಳು ಬರುತ್ತಿದಂತೆ ಭದ್ರತಾ ಸಿಬ್ಬಂದಿ, ಟೊಮೆಟೊವನ್ನು ಗನ್‌‌ಗಳನ್ನು ಹಿಡಿದುಕೊಂಡು ಭದ್ರತೆ ನೀಡುತ್ತಿದ್ದಾರೆ. 
 

ವೆಬ್ದುನಿಯಾವನ್ನು ಓದಿ