ರಾಷ್ಟ್ರ ರಾಜಧಾನಿಯಲ್ಲಿ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ

ಶನಿವಾರ, 21 ಆಗಸ್ಟ್ 2021 (12:06 IST)
ನವದೆಹಲಿ, ಆ.21 : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಬೆಳಗ್ಗೆ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಸ್ತೆಗಳಲ್ಲಿ ನೀರು ತುಂಬಿಕೊಂಡು ಪ್ರಮುಖ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಚಾಗಿತ್ತು. ಅಂಡರ್ಪಾಸ್ ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಪರಿಸ್ಥಿತಿ ನಿಬಾಯಿಸಲು ಪರದಾಡುವಂತಾಗಿತ್ತು. ದಿಢೀರನೆ ಬೆಳಗ್ಗೆ ಭಾರೀ ಮಳೆ ಸುರಿದು ಕಚೇರಿಗೆ ತೆರಳುವವರು, ವ್ಯಾಪಾರ ವಹಿವಾಟು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಯಿತು. ಲಾಜ್ಪತ್ ಸಂಗತ್ಪುರಿನ್ ಮಲ್ವಿಯಾ ನಗರ ಸೇರಿದಂತೆ ಹಲವೆಡೆ ಜನರು ಮನೆಯಿಂದ ಆಚೆ ಬರಲು ಸಾಧ್ಯವಾಗದ ಪರಿಸ್ಥಿತಿ ಇತ್ತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ