ಭಾರೀ ಮಳೆಯಿಂದ ರೈಲು ರದ್ದು!

ಶುಕ್ರವಾರ, 15 ಜುಲೈ 2022 (09:21 IST)
ಗಾಂಧಿನಗರ : ಭಾರೀ ಮಳೆಯಿಂದಾಗಿ ರೈಲು ರದ್ದು ಗೊಳಿಸಿದ್ದಕ್ಕೆ ಭಾರತೀಯ ರೈಲ್ವೆ ಇಲಾಖೆಯು ವಿದ್ಯಾರ್ಥಿಯೊಬ್ಬನಿಗೆ ಕಾರಿನ ಮೂಲಕ ಆತನನ್ನು ವಡೋದರಕ್ಕೆ ತಲುಪಿಸಿದ ವಿಚಿತ್ರ ಘಟನೆ ಗುಜರಾತ್ನಲ್ಲಿ ನಡೆದಿದೆ.
 
ಸತ್ಯಂ ಗಧ್ವಿ ಎಂಬಾತ ತಮಿಳುನಾಡಿನ ಐಐಟಿ ಮ್ರಾಸ್ನ ಏರೋಸ್ಪೇಸ್ ಇಂಜಿನಿಯರಿಂಗ್ ಆಗಿ ಓದುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ ಏಕತಾ ನಗರ ರೈಲು ನಿಲ್ದಾಣದಿಂದ ವಡೋರಾ ನಿಲ್ದಾಣಕ್ಕೆ ಟಿಕೆಟ್ ಬುಕ್ ಮಾಡಿದ್ದ.

ಆದರೆ ಭಾರೀ ಮಳೆಯಿಂದಾಗಿ ಏಕತಾ ನಗರದಲ್ಲಿ ರೈಲು ಹಳಿಗೆಲ್ಲವೂ ಕೊಚ್ಚಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ರೈಲನ್ನು ರದ್ದುಗೊಳಿಸಿದರು.

ಆದರೆ ಸ್ತಯಂ ಗಧ್ವಿ ಮೊದಲೆ ಟಿಕೆಟ್ ಬುಕ್ ಮಾಡಿದ್ದರಿಂದ ಆತನಿಗೆ ಚೈನ್ನೈ ತಲುಪಲು ಯಾವುದೇ ತೊಂದರೆ ಆಗಬಾರದು ಎಂದು ಅಲ್ಲಿನ ರೈಲ್ವೆ ಅಧಿಕಾರಿಗಳು ಒಂದು ಬಾಡಿಗೆ ಕಾರಿನ ಮೂಲಕ ಅವನನ್ನು 2 ಗಂಟೆಯಲ್ಲಿ ವಡೋರಕ್ಕೆ ಕಾರಿನ ಮೂಲಕ ಸುರಕ್ಷಿತವಾಗಿ ಕರೆದೊಯ್ದಿದ್ದಾರೆ. 

ಈ ಬಗ್ಗೆ ಸತ್ಯಂ ಗಧ್ವಿ ಟ್ವೀಟ್ ಮಾಡಿದ್ದು, ನಾನು ಬುಕ್ ಮಾಡಿದ ರೈಲು ಏಕತಾ ನಗರದಿಂದ ಹೊರಡಬೇಕಿತ್ತು. ಆದರೆ ಮಳೆಯಿಂದಾಗಿ ಹಳಿಗಳು ಕೊಚ್ಚಿಹೋಗಿದ್ದರಿಂದ ಕೊನೆಯ ಕ್ಷಣದಲ್ಲಿ ರೈಲನ್ನು ರದ್ದುಗೊಳಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ