ಉಸಿರಾಗುವ ಮರಕ್ಕೆ ವಿಷವಿಕ್ಕಿದರು

ಸೋಮವಾರ, 16 ಜನವರಿ 2017 (07:50 IST)
ಮನುಷ್ಯರಿಗೆ, ಪ್ರಾಣಿ ಪಕ್ಷಿಗಳಿಗೆ ವಿಷ ಉಣಿಸುವುದನ್ನು ನೋಡಿರುತ್ತೀರ. ಆದರೆ ಉಸಿರು ನೀಡುವ ಮರಕ್ಕೆ ವಿಷ ನೀಡಿದ ಬಗ್ಗೆ ಕೇಳಿರುತ್ತೀರಾ ? ಹೌದು ಇಂತಹ ಪಾಪಿಗಳು ಇದ್ದಾರೆ. ಇದು ದೂರದಲ್ಲೆಲ್ಲೋ ನಡೆದ ಘಟನೆ ಅಲ್ಲ. ನಮ್ಮ ನಾಡಲ್ಲೇ ನಡೆಸಲಾದ ಹೇಯ ಕೃತ್ಯವಿದು.
 

 
ಬೆಲೆಬಾಳುವ ಮರಗಳಿಂದ ಬದುಕು ಕಟ್ಟಿಕೊಳ್ಳಬೇಕೆಂದು ಕನಸು ಕಂಡಿದ್ದ ರೈತ ರಾಮಪ್ರಸನ್ನ ಕಳೆದ 20 ವರ್ಷಗಳಿಂದ ಬೆಳೆಸಿದ್ದ ತೇಗದ ಮರಗಳಿಗೆ ದುಷ್ಕರ್ಮಿಗಳು ವಿಷ ಉಣಿಸಿದ ಹೇಯ ಕೃತ್ಯ ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. 
 
ಏಕಾಏಕಿ ಮರಗಳೇಕೆ  ಒಣಗುತ್ತಿವೆ ಎಂದು ಪರಿಶೀಲಿಸಲಾಗಿ ಮರದ ಬುಡದಲ್ಲಿ ಹೋಲ್ ಮಾಡಿ ವಿಷಯುಕ್ತ ರಾಸಾಯನಿಕವನ್ನು ಸುರಿಯಲಾಗಿದೆ. ಹೀಗಾಗಿ ಮರಗಳು ದಿನೇ ದಿನೇ ಒಣಗುತ್ತಿವೆ. ಇನ್ನು 5 ವರ್ಷಗಳಲ್ಲಿ ಕಟಾವಿಗೆ ಬರಲಿದ್ದ ಮರಗಳು ಹೀಗೆ ಒಣಗಿ ಹೋಗುತ್ತಿರುವುದು ರೈತ ಪ್ರಸನ್ನ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
 
ಮತ್ತೀಗ ಅವರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ