ಲಕ್ನೋ : ವಾರಣಾಸಿಯ ಜಿಲ್ಲಾ ಕೋರ್ಟ್ನಲ್ಲಿ ಇಂದು ಕಾಶಿಯ ಜ್ಞಾನವಾಪಿ ಮಸೀದಿ ವಿಚಾರಣೆ ನಡೆಯೋ ಸಾಧ್ಯತೆ ಇದೆ.
ಪ್ರಕರಣವನ್ನು ಸಿವಿಲ್ ಕೋರ್ಟ್ನಿಂದ ಜಿಲ್ಲಾ ಕೋರ್ಟ್ಗೆ ವರ್ಗಾಯಿಸಬೇಕು ಅಂತ ದೆಹಲಿ ಮೂಲದ ಮಹಿಳೆ ಕೇಳಿಕೊಂಡಿದ್ದರು. ಪ್ರಕರಣದ ಸಂಕೀರ್ಣತೆ, ಸೂಕ್ಷ್ಮತೆಯಿಂದಾಗಿ ಪ್ರಕರಣವನ್ನು ವರ್ಗಾಯಿಸ್ತಿದ್ದೇವೆ ಅಂತ ಸುಪ್ರೀಂಕೋರ್ಟ್ ಹೇಳಿತ್ತು.
ಇನ್ನು, ಮಸೀದಿ ಒಳಗೆ ಪತ್ತೆಯಾದ ಶಿವಲಿಂಗದ ಬಗ್ಗೆ ಪರ-ವಿರೋಧ ಮುಂದುವರಿದಿದೆ. ಈ ನಡುವೆ ಕಾಶಿ ವಿಶ್ವನಾಥ ದೇವಸ್ಥಾನದ ಮಾಜಿ ಮಹಾಂತರಾದ ಡಾ ಕುಲಪತಿ ತಿವಾರಿ ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಮೇಲಿನ ಕಪಾಟಿನಲ್ಲಿ ಸಣ್ಣ ಶಿವಲಿಂಗವನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಮಸೀದಿಯ ನೆಲಮಾಳಿಗೆಯಲ್ಲಿ ಕಾಶಿ ವಿಶ್ವನಾಥನಿಗೆ ಹೊಂದಿಕೊಂಡಂತೆ ಮತ್ತೊಂದು ಶಿವಲಿಂಗ ಇದೆ. ನಾನು ಅದನ್ನು ನೋಡಿದ್ದೇನೆ. ಅದಕ್ಕೆ ಬೇಕಾದ ಸಾಕ್ಷ್ಯ ಇದೆ. ಅದು ಸ್ವಯಂಭೂ ಲಿಂಗವಾಗಿದೆ. ಅಲ್ಲಿ ಪೂಜೆಗೆ ಅವಕಾಶ ಕೋರಿ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಅಲ್ಲಿ ಶಿವಲಿಂಗವೇ ಇಲ್ಲ.
2024ರ ಚುನಾವಣೆಗೆ ಇಷ್ಟೆಲ್ಲಾ ಅಜೆಂಡಾ ಮಾಡ್ತಿದ್ದಾರೆ ಅಂಥ ಅಂತ ಎಸ್ಪಿ ಸಂಸದ ಶಫಿಕುರ್ ರಹಮಾನ್ ಬಾರ್ಗ್ ಹೇಳಿದ್ದಾರೆ.