ತ್ರಿವಳಿ ತಲಾಖ್ ನಿಷೇಧ ತಿದ್ದುಪಡಿ ಮಸೂದೆ ವಿಚಾರ; ಕಾಂಗ್ರೆಸ್ ನ ವಿರುದ್ಧ ಕಿಡಿಕಾರಿದ ಸುಬ್ರಮಣಿಯನ್ ಸ್ವಾಮಿ

ಬುಧವಾರ, 2 ಜನವರಿ 2019 (06:56 IST)
ನವದೆಹಲಿ : ತ್ರಿವಳಿ ತಲಾಖ್ ನಿಷೇಧ ತಿದ್ದುಪಡಿ ಮಸೂದೆಯ ಬಗ್ಗೆ ರಾಜ್ಯಸಭೆಯಲ್ಲಿ ನಡೆಯುತ್ತಿರುವ ಗದ್ದಲದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ನ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳವಾರ ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯ ಬಗ್ಗೆ ಚರ್ಚೆಯ ವೇಳೆ ವಿಪಕ್ಷಗಳು ಜಂಟಿ ಸಂಸದೀಯ ಸಮಿತಿಗೆ ಆಯ್ಕೆ ಪರಿಶೀಲನೆಗೆ ಒಪ್ಪಿಸುವಂತೆ ಪಟ್ಟು ಹಿಡಿದವು. ಎಐಡಿಎಂಕೆ ಸದಸ್ಯರ ಜೊತೆ ವಿಪಕ್ಷಗಳು ಅಡ್ಡಿ ಪಡಿಸಿದ ಪರಿಣಾಮ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.

 

ಈ ಬಗ್ಗೆ ಸುದ್ದಿ ಸಂಸ್ಥೆಯೊಂದರಲ್ಲಿ ಪ್ರತಿಕ್ರಿಯಿಸಿದ ಸುಬ್ರಮಣಿಯನ್ ಸ್ವಾಮಿ ಅವರು,’ ಕಾಂಗ್ರೆಸ್ ಯಾವಾಗಲೂ ಇಟಲಿ ಮೂಲದ ಮಹಿಳೆಯ ಆಸಕ್ತಿಯ ಕುರಿತು ಚಿಂತಿಸುತ್ತದೆ ಹೊರತು ಭಾರತೀಯ ಮುಸ್ಲಿಮ್ ಮಹಿಳೆಯರ ಕಷ್ಟಗಳ ಬಗ್ಗೆ ಚಿಂತಿಸುವುದಿಲ್ಲ’ ಎಂದು ಹೇಳಿದ್ದಾರೆ.

 

ದೇಶದಲ್ಲಿ ಈಗಾಗಲೇ ತ್ರಿವಳಿ ತಲಾಕ್ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಕಾಯ್ದೆ ರೂಪುಗೊಳ್ಳದೇ ದಿನದೂಡುವಂತೆ ಮಾಡಲು ಈಗ ಜಂಟಿ ಸಂಸದೀಯ ಸಮಿತಿಯ ಆಯ್ಕೆ ಪರಿಶೀಲನೆಗೆ ಒಪ್ಪಿಸುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ನಿಜಕ್ಕೂ ಇದು ನಾಚಿಕೆಗೇಡಿನ ವಿಚಾರ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ