ನನಗೆ ನ್ಯಾಯ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ಮೋದಿಗೆ ತ್ರಿವಳಿ ತಲಾಖ್ ಸಂತ್ರಸ್ತೆ ಮೊರೆ
ಶುಕ್ರವಾರ, 19 ಮೇ 2017 (13:23 IST)
ಈ ವ್ಯವಸ್ಥೆ ನನಗೆ ನ್ಯಾಯ ಕೊಡುವುದರಲ್ಲಿ ವಿಫಲವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತ್ರಿವಳಿ ತಲಾಖ್ ಸಂತ್ರಸ್ತೆಯೊಬ್ಬರು ನರೇಂದ್ರಮೋದಿ ಮತ್ತು ಸುಪ್ರೀಂಕೋರ್ಟ್`ಗೆ ಮೊರೆ ಇಟ್ಟಿದ್ದಾರೆ. ಪತಿಯಿಂದ ತ್ರಿವಳಿ ತಲಾಖ್ ಪಡೆದಿರುವ ಉತ್ತರಪ್ರದೇಶ ಮಹಿಳೆಯೊಬ್ಬರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಐವರು ನ್ಯಾಯಾಧೀಶರನ್ನೊಳಗೊಂಡ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ 6 ದಿನಗಳ ಕಾಲ ನಿರಂತರ ವಿಚಾರಣೆ ನಿನ್ನೆಯಷ್ಟೇ ವಿಚಾರಣೆಯನ್ನ ಪೂರ್ಣಗೊಳಿಸಿ ತೀರ್ಪನ್ನ ಕಾಯ್ದಿರಿಸಿದೆ. ಜೂನ್`ನಲ್ಲಿ ತೀರ್ಪುಹೊರಬೀಳುವ ಸಾಧ್ಯತೆ ಇದೆ.
ತ್ರಿವಳಿ ತಲಾಖ್ ಸಂತ್ರಸ್ತ ಹಲವಾರು ಮಹಿಳೆಯರು ಪ್ರಧಾನಿ ಮೋದಿ ಮತ್ತು ಸುಪ್ರೀಂಕೋರ್ಟ್ ಮುಂದೆ ತಮಗೆ ನ್ಯಾಯ ಕೊಡಿಸುವಂತೆ ಕೋರಿದ್ದರು. ಬಳಿಕ ಮುಖ್ಯ ನ್ಯಾಯಮೂರ್ತಿ ಖೇಹರ್, ತಲಾಖ್ಸಾಂವಿಧಾನಿಕ ಮಾನ್ಯತೆ ಕುರಿತ ನಿರ್ಧಾರಕ್ಕೆ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವನ್ನ ರಚಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ