ಕೋವಿಡ್ ದೃಢಪಟ್ಟವರಲ್ಲೇ ಹೆಚ್ಚು ಹೃದಯಾಘಾತ: ಕೋವಿಡ್ ಲಸಿಕೆ ಬಗ್ಗೆ ದಿನೇಶ್ ಗುಂಡೂರಾವ್‌ ಸ್ಫೋಟಕ ಮಾಹಿತಿ

Sampriya

ಸೋಮವಾರ, 7 ಜುಲೈ 2025 (15:19 IST)
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದರು. 

ಹೃದಯಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಆದರೆ ಯಾರಾಲ್ಲಿ ಕೋವುಡ್ ಪ್ರಕರಣಗಳು ಕಂಡುಬಂದಿತ್ತು, ಅಂತವರಲ್ಲೇ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿದೆ. 

ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಹಠಾತ್ ಸಾವಿನ ಬಗ್ಗೆ ಸಮಿತಿ ರಚನೆ ಮಾಡಿದ್ರು. ಸಂಶೋಧನೆ ಮಾಡಲು ಆದೇಶಿಸಿದ್ದರು. ಹಾಗೇ ಕೋವಿಡ್​ ಲಸಿಕೆಯ ದುಷ್ಪರಿಣಾಮಗಳು ಹಾಗೂ ಸಾವಿನ ಬಗ್ಗೆ ವರದಿ ಸಲ್ಲಿಸಲು ಹೇಳಿದ್ದರು.

ಡಾ. ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ಸಂಶೋಧನೆ ನಡೆದಿದ್ದು, ಜಯದೇವ ಆಸ್ಪತ್ರೆಯಲ್ಲಿ ಕೋವಿಡ್​ ಪೂರ್ವ ಮತ್ತು ಕೋವಿಡ್​ ನಂತರದ ಪರಿಸ್ಥಿತಿ ಹೋಲಿಕೆ  ಮಾಡಲಾಗಿದೆ ಎಂದು ದಿನೇಶ್​ ಗುಂಡೂರಾವ್ ಹೇಳಿದ್ರು.

ಈ ವರದಿಯಲ್ಲಿ ಕೋವಿಡ್​ ಆದವರಲ್ಲೇ ಹೆಚ್ಚು ಹೃದಯಾಘಾತ ಆಗಿರುವುದು ಕಂಡು ಬಂದಿದೆ. ಮಧುಮೇಹ, ಒಬೆಸಿಟಿ ಹಾಗೂ ಹೆಚ್ಚಿದ ರಿಸ್ಕ್ ಫ್ಯಾಕ್ಟರ್ಸ್ ಇದಕ್ಕೆ ಕಾರಣವಾಗಿದೆ. ಕೋವಿಡ್​ ಪರಿಣಾಮ ಜನಸಾಮಾನ್ಯರ ಮೇಲೆ ಆಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದೇಹದ ಚಟುವಟಿಕೆ ಇಲ್ಲದೆ ದಪ್ಪ ಆಗಿರುವುದು ಮತ್ತು ಹೆಚ್ಚು ಫೋನ್ ಮತ್ತು ಟಿವಿಯಿಂದ ಸ್ಕ್ರೀನ್ ಟೈಮ್ ಹೆಚ್ಚಾದ ಕಾರಣದಿಂದ ಹೃದಯಾಘಾತ ಸ್ವಲ್ಪ ಮಟ್ಟಿಗೆ ಹೆಚ್ಚಾಗಿರುವುದು ಕಂಡು ಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ