ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಹಾಕುವ ಪ್ರಾಣಿ ಹಸು-ಸಿಎಂಯಿಂದ ಅಸಂಬದ್ಧ ಹೇಳಿಕೆ

ಶನಿವಾರ, 27 ಜುಲೈ 2019 (11:58 IST)
ಉತ್ತರಖಂಡ: ಹಸುವಿನ ಬಗ್ಗೆ ಹೇಳಿಕೆಯೊಂದನ್ನು ನೀಡಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ.



ಹಸುವಿನ ಹಾಲು ಮತ್ತು ಗೋಮೂತ್ರದ ವೈದ್ಯಕೀಯ ಉಪಯೋಗದ ಬಗ್ಗೆ ತಿಳಿಸುವಾಗ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು, ಹಸು ಆಮ್ಲಜನಕವನ್ನೇ ಉಸಿರಾಡಿ ಆಮ್ಲಜನಕವನ್ನೇ ಹೊರಹಾಕುವ ಏಕೈಕ ಪ್ರಾಣಿ. ಹಸುವಿನ ಮೈ ಮಸಾಜ್​ ಮಾಡುವುದರಿಂದ ಉಸಿರಾಟದ ಸಮಸ್ಯೆಯನ್ನು ನೀಗಿಸಿಕೊಳ್ಳಬಹುದು. ಅಲ್ಲದೇ ಗೋವಿನ ಆಸುಪಾಸಿನಲ್ಲಿರುವವರಿಗೆ ಕ್ಷಯರೋಗ ಕೂಡ ಬರುವುದಿಲ್ಲ ಎಂದು  ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ಅಲ್ಲಗೆಳೆದ ಜಾನುವಾರು ಮತ್ತು ಪಶುಸಂಗೋಪನಾ ತಜ್ಞರು, ಎಲ್ಲ ಜೀವಿಗಳಂತೆ ಹಸು ಕೂಡ ಆಕ್ಸಿಜನ್ ಒಳಗೆ ಎಳೆದುಕೊಂಡು ಇಂಗಾಲದ ಡೈ ಆಕ್ಸೈಡ್​ ಅನ್ನು ಹೊರಬಿಡುತ್ತದೆ ಎಂದು ಸ್ಪಷ್ಟಪಡಿಸಿದೆ.ಇದಕ್ಕೆ ತ್ರಿವೇಂದ್ರ ಸಿಂಗ್ ರಾವತ್ ಕಚೇರಿ, ಉತ್ತರಾಖಂಡದ ತಪ್ಪಲಿನ ಪ್ರದೇಶದಲ್ಲಿ ಈ ರೀತಿಯ ನಂಬಿಕೆಯಿದೆ ಎಂಬುದಾಗಿ ತಿಳಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ