ತುಟಿಯ ಮೇಲೆ ಮೂಡಿರುವ ನೀರಿನ ಗುಳ್ಳೇಗಳ ನಿವಾರಣೆಗೆ ಈ ಮನೆಮದ್ದನ್ನು ಬಳಸಿ

ಮಂಗಳವಾರ, 16 ಜುಲೈ 2019 (09:25 IST)
ಬೆಂಗಳೂರು : ನೀರು ಕುಡಿಯದಿದ್ದಾಗ ದೇಹದ ಉಷ್ಣಾಂಶ ಹೆಚ್ಚಾಗಿ ತುಟಿಯ ಮೇಲೆ ನೀರಿನ ಗುಳ್ಳೆಗಳು ಏಳುತ್ತವೆ. ಇದು ತುಂಬಾ ನೋವುತ್ತಿರುತ್ತದೆ. ಇದರಿಂದ ಖಾರವಾದ ವಸ್ತುಗಳನ್ನು ಸೇವಿಸಲು ಆಗುವುದಿಲ್ಲ. ಈ ಗುಳ್ಳೆಗಳು ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.




* ಹಾಲು ಇಮ್ಯುನೊಗ್ಲಾಬ್ಯುಲಿನ್ ಗಳನ್ನು ಹೊಂದಿರುತ್ತದೆ, ಅದು ಶೀತಲ ಗುಳ್ಳೆಗಳನ್ನು ಉಂಟುಮಾಡುವ ವೈರಸ್ ಅನ್ನು ತಡೆಯುತ್ತದೆ. ಜೊತೆಗೆ, ಇದು ಆಂಟಿವೈರಲ್ ಪರಿಣಾಮಗಳನ್ನು ಹೊಂದಿದೆ. ತಂಪಾದ ಹಾಲಿನಲ್ಲಿ ಹತ್ತಿಯನ್ನು ಅದ್ದಿ,ಪೀಡಿತ ಪ್ರದೇಶದ ಮೇಲೆ ಇದನ್ನು ಹಚ್ಚಿ ಮತ್ತು 10 ನಿಮಿಷಗಳ ಕಾಲ ಬಿಡಿ.ದಿನದಲ್ಲಿ ಎರಡು ಬಾರಿ ಇದನ್ನು ಪುನರಾವರ್ತಿಸಿ.


*ಚಹಾ ಮರದ ತೈಲ (ಟೀ ಟ್ರೀ ತೈಲ) ಚಹಾ ಮರದ ತೈಲ ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ, ಅದು ಶೀತಲ ಗುಳ್ಳೆಗಳ ಚಿಕಿತ್ಸೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.ಅರ್ಧ ಕಪ್ ನೀರಿನಲ್ಲಿ ಒಂದು ಪ್ರಮಾಣ ಚಹಾ ಮರದ ಎಣ್ಣೆಯನ್ನು ಡೈಲ್ಯೂಟ್ ಮಾಡಿ.ಹತ್ತಿಯ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ಮತ್ತು ದಿನಕ್ಕೆ ಮೂರು ಬಾರಿ ಶೀತಲ ಗುಳ್ಳೆಗಳ ಮೇಲೆ ಇದನ್ನು ಹಚ್ಚಿ.




 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ