ಕೇರಳದ ವೋಲ್ವೊ ಬಸ್ ಗೆ ಟ್ರಕ್ ಡಿಕ್ಕಿ; 19 ಮಂದಿ ದುರ್ಮರಣ

ಗುರುವಾರ, 20 ಫೆಬ್ರವರಿ 2020 (11:11 IST)
ಚೆನ್ನೈ : ಕೇರಳದ ವೋಲ್ವೊ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಇದರಲ್ಲಿ 19 ಮಂದಿ ಮೃತಪಟ್ಟಿದ ಘಟನೆ ತಮಿಳುನಾಡಿನ ಕೊಯಮುತ್ತೂರಿನ ಹೆದ್ದಾರಿಯಲ್ಲಿ ನಡೆದಿದೆ.

50ಕ್ಕೂ ಹೆಚ್ಚು ಮಂದಿಯನ್ನು ಹೊತ್ತಿದ್ದ ಬಸ್ ಬೆಂಗಳೂರಿನಿಂದ ತಿರುವನಂತಪುರಕ್ಕೆ ಹೋಗುತ್ತಿತ್ತು.  ಕೊಯಮತ್ತೋರು-ಸೇಲಂ ಹೆದ್ದಾರಿಯಲ್ಲಿ ಬೆಳಿಗ್ಗೆ 4.30ಕ್ಕೆ ಎದುರುಗೆ ವೇಗವಾಗಿ ಬಂದ ಟ್ರಕ್  ಬಸ್ ಗೆ ಡಿಕ್ಕಿ ಹೊಡೆದಿದೆ.
 

ಈ ಘಟನೆಯ ಪರಿಣಾಮ 19 ಮಂದಿ ಮೃತಪಟ್ಟಿದ್ದು, 23 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಟ್ರಕ್ ಚಾಲಕ ಪರಾರಿಯಾಗಿದ್ದು, ಪೊಲೀಸರು ಆತನ ಹುಡುಕಾಟದಲ್ಲಿ  ನಡೆಸುತ್ತಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ